×
Ad

ಪವರ್ ಲಿಫ್ಟಿಂಗ್: ಕುಂದಾಪುರದ ವಿಶ್ವನಾಥ್‌ಗೆ ಬೆಳ್ಳಿ ಪದಕ

Update: 2018-02-18 21:39 IST

ಕುಂದಾಪುರ, ಫೆ.18: ಜಮ್ಮು ಕಾಶ್ಮೀರದಲ್ಲಿ ನಡೆದ ಫೆಡರೇಶನ್ ಕಪ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕುಂದಾಪುರ ಕಟ್‌ಬೆಲ್ತೂರಿನ ವಿಶ್ವನಾಥ ಗಾಣಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಈ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ಎರಡು ಪದಕ ಗೆದ್ದುಕೊಂಡಿದ್ದು, ಪ್ರದೀಪ್ ಕಂಚಿನ ಪದಕ ಮತ್ತು ರೈಲ್ವೇಸ್‌ನ ವಿಮಲ್ ರಾಜ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಫೆಡರೇಶನ್ ಕಪ್ ಪವರ್ ಲಿಫ್ಟಿಂಗ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದವರು ನೇರವಾಗಿ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗುತ್ತಾರೆ. ಮುಂಬರುವ ಮೇ ತಿಂಗಳಲ್ಲಿ ಈ ಪಂದ್ಯಾವಳಿ ಭಾರತದಲ್ಲಿ ನಡೆಯಲಿದೆ.

ದೇವಲ್ಕುಂದದ ಭಾಸ್ಕರ ಗಾಣಿಗ ಹಾಗೂ ಪದ್ಮಾವತಿ ದಂಪತಿ ಪುತ್ರರಾಗಿರುವ ವಿಶ್ವನಾಥ ಗಾಣಿಗ ಬೆಂಗಳೂರಿನ ಜಿಟಿ ನೆಕ್ಸಸ್ ಸ್‌ಟಾವೇರ್ ಕಂಪೆನಿ ಉದ್ಯೋಗಿ ಯಾಗಿದ್ದಾರೆ. ಇದು ವಿಶ್ವನಾಥ ಅವರ 18ನೆ ರಾಷ್ಟ್ರೀಯ ಪದಕವಾಗಿದ್ದು, ಇತ್ತೀಚೆಗೆ ಕೇರಳದಲ್ಲಿ ನಡೆದ ಏಷ್ಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಸೇರಿದಂತೆ ಒಟ್ಟು 6 ಅಂತಾರಾಷ್ಟ್ರೀಯ ಚಿನ್ನದ ಪದಕಗಳನ್ನು ಗೆದ್ದು ಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News