ರಸ್ತೆ ಅಪಘಾತ: ಮುಂಬೈಯ ಉದ್ಯಮಿ ಮೃತ್ಯು
Update: 2018-02-18 21:48 IST
ಶಂಕರನಾರಾಯಣ, ಫೆ.18: ವಂಡಾರು ಗ್ರಾಮದ ಮಾವಿನಕಟ್ಟೆ ಚಕ್ಕರಬೆಟ್ಟು ಎಂಬಲ್ಲಿ ರಸ್ತೆಯ ತಿರುವಿನಲ್ಲಿ ಫೆ.17ರಂದು ಬೆಳಗ್ಗೆ ಕಾರೊಂದು ಬೈಕಿಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮುಂಬೈಯ ಹೊಟೇಲ್ ಉದ್ಯಮಿ ಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಬೈಕ್ ಸವಾರ ಭೋಜರಾಜ ಹೆಗ್ಡೆ ಎಂದು ಗುರುತಿಸಲಾಗಿದೆ. ಹಿಂಬದಿ ಸವಾರಿ ಮಾಡುತ್ತಿದ್ದ ಅವರ ಪತ್ನಿ ಸುಶೀಲಾ ಗಂಭೀರವಾಗಿ ಗಾಯ ಗೊಂಡು ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೋಳಿಯಂಗಡಿ ಕಡೆಯಿಂದ ಮಂದರ್ತಿ ಕಡೆಗೆ ಹೋಗುತ್ತಿದ್ದ ಕಾರು ಎದುರಿ ನಿಂದ ಪತ್ನಿ ಜೊತೆ ಬರುತ್ತಿದ್ದ ಭೋಜರಾಜ ಅವರ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರಿಂದ ಇಬ್ಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡರು. ಇವರಲ್ಲಿ ಭೋಜರಾಜ ಹೆಗ್ಡೆ ಚಿಕಿತ್ಸೆ ಫಲಕಾರಿಯಾಗದೆ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.