×
Ad

ಸಾರ್ವಜನಿಕ ರಂಗದ ಬ್ಯಾಂಕ್ ಖಾಸಗೀಕರಣಕ್ಕೆ ಅಸೊಚಾಮ್ ಆಗ್ರಹ

Update: 2018-02-18 22:20 IST

ಮುಂಬೈ, ಫೆ. 18: ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ವಜ್ರೋದ್ಯಮಿ ನೀರವ್ ಮೋದಿ 11,300 ಕೋ. ರೂ. ವಂಚಿಸಿರುವುದು ಬೆಳಕಿಗೆ ಬಂದ ಬಳಿಕ ಇಂಡಸ್ಟ್ರಿ ಚೇಂಬರ್ ಅಸೊಚಾಮ್, ಸಾರ್ವಜನಿಕ ರಂಗದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಿ ಎಂದು ಆಗ್ರಹಿಸಿದೆ. ಈ ವಾರಾರಂಭದಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್, ತನ್ನ ಮುಂಬೈ ಬ್ರಾಂಚ್‌ನಲ್ಲಿ 1,771.69 ದಶಲಕ್ಷ ಡಾಲರನ್ನು ವಂಚನೆಯಿಂದ ವರ್ಗಾವಣೆ ಮಾಡಿರುವುದನ್ನು ಪತ್ತೆ ಹಚ್ಚಿತ್ತು. ಇದು ಬ್ಯಾಂಕ್‌ನ ಒಟ್ಟು ಆದಾಯ 1,320 ಕೋ. ರೂ.ನ 8 ಪಾಲಿಗೆ ಸಮಾನವಾಗಿತ್ತು. ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ 11,300 ಕೋ. ರೂ. ವಂಚನೆಯ ವರ್ಗಾವಣೆ ಬ್ಯಾಂಕ್‌ಗಳಲ್ಲಿ ಶೇರನ್ನು ಶೇ. 50ಕ್ಕಿಂತ ಕಡಿಮೆ ಮಾಡಲು ಸರಕಾರಕ್ಕೆ ಪ್ರಬಲ ಪ್ರಚೋದನೆ ನೀಡಬೇಕು. ಇದು ಠೇವಣಿದಾರರ ಹಿತಾಸಕ್ತಿಯನ್ನು ರಕ್ಷಿಸುವ ತಮ್ಮ ಶೇರುದಾರರ ಉತ್ತರದಾಯಿತ್ವದ ಪೂರ್ಣ ಪ್ರಜ್ಞೆಯೊಂದಿಗೆ ಖಾಸಗಿ ಬ್ಯಾಂಕ್‌ಗಳ ರೀತಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದು ಅಸೊಚಾಮ್ ಹೇಳಿಕೆಯಲ್ಲಿ ತಿಳಿಸಿದೆ. ಸಮಸ್ಯೆ ಇಲ್ಲದಿದ್ದರೂ ಅಧಿಕಾರಿಗಳು ನೀಡುವ ನಿರ್ದೇಶನ ಸ್ವೀಕರಿಸಲು ಹಾಗೂ ಅನುಷ್ಠಾನಗೊಳಿಸಲು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಹಿರಿಯ ನಿರ್ವಹಣಾದಾರರು ದೊಡ್ಡ ಮೊತ್ತದಲ್ಲಿ ತಮ್ಮ ಸಮಯ ವಿನಿಯೋಗಿಸುತ್ತಿದ್ದಾರೆ ಎಂದು ಅಸೊಚಾಮ್ ಹೇಳಿದೆ. ಈ ಪ್ರಕ್ರಿಯೆಯಲ್ಲಿ ಎಲ್ಲ ಮುಖ್ಯವಾದ ಹಾನಿ ತಗ್ಗಿಸುವಿಕೆ ಹಾಗೂ ನಿರ್ವಹಣೆ ಸೇರಿದಂತೆ ಕೋರ್ ಬ್ಯಾಂಕಿಂಗ್ ನಿರ್ವಹಣೆ ಪ್ರಾಮುಖ್ಯತೆ ಕಳೆದುಕೊಳ್ಳುತ್ತದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News