ಆಸ್ಪತ್ರೆಯಲ್ಲಿ ಗೋವಾ ಸಿಎಂರನ್ನು ಭೇಟಿಯಾದ ಪ್ರಧಾನಿ ಮೋದಿ

Update: 2018-02-18 17:01 GMT

ಮುಂಬೈ, ಫೆ.18: ಇಲ್ಲಿನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋವಾ ಸಿಎಂ ಮನೋಹರ್ ಪಾರಿಕ್ಕರ್ ರನ್ನು ಪ್ರಧಾನಿ ನರೇಂದ್ರ ಮೋದಿ ರವಿವಾರ ಭೇಟಿಯಾದರು.

ಹೊಟ್ಟೆನೋವಿನಿಂದ ಬಳಲುತ್ತಿದ್ದ ಪಾರಿಕ್ಕರ್ ರನ್ನು ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರ ಸಲಹೆಯಂತೆ ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅನಾರೋಗ್ಯದ ಹಿನ್ನೆಲೆಯಲ್ಲಿ ಪಾರಿಕ್ಕರ್ ಬಜೆಟ್ ಅಧಿವೇಶನಕ್ಕೆ ಗೌರು ಹಾಜರಾಗುವ ಸಾಧ್ಯತೆಯಿದ್ದು. ಚಿಕಿತ್ಸೆ ಮುಂದುವರಿಯಲಿದೆ. ಇದೀಗ ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಪಾರಿಕ್ಕರ್ ಕ್ಯಾನ್ಸರ್ ನಿಂದ ಬಳಲುತ್ತಿಲ್ಲ: ಮನೋಹರ್ ಪಾರಿಕ್ಕರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎನ್ನುವ ಮಾಧ್ಯಮಗಳ ವರದಿಯನ್ನು ಮುಂಬೈ ಲೀಲಾವತಿ ಆಸ್ಪತ್ರೆ ಸುಳ್ಳು ಎಂದಿದೆ,

ಮಾಧ್ಯಮಗಳಲ್ಲಿ ಪಾರಿಕ್ಕರ್ ಆರೋಗ್ಯದ ಬಗ್ಗೆ ದಾರಿ ತಪ್ಪಿಸುವ, ದುರುದ್ದೇಶಪೂರಿತ ಸುದ್ದಿಗಳು ಪ್ರಸಾರವಾಗಿರುವುದು ನಮ್ಮ  ಗಮನಕ್ಕೆ ಬಂದಿದೆ. ಇಂತಹ ಎಲ್ಲಾ ವರದಿಗಳನ್ನು ನಾವು ನಿರಾಕರಿಸುತ್ತೇವೆ ಎಂದು ಆಸ್ಪತ್ರೆಯು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News