×
Ad

ಅಡ್ಯಾರ್-ಕಣ್ಣೂರು ಉರೂಸ್‌ಗೆ ಚಾಲನೆ

Update: 2018-02-18 22:34 IST

ಮಂಗಳೂರು, ಫೆ.18: ಅಡ್ಯಾರ್ ಕಣ್ಣೂರು ಹಝ್ರತ್ ಶೈಖ್ ಯೂಸುಫ್ ಸಿದ್ದೀಕ್ ವಲಿಯುಲ್ಲಾಹಿಯ ದರ್ಗಾ ಶರೀಫ್ ಉರೂಸ್ ಮುಬಾರಕ್‌ಗೆ ರವಿವಾರ ಚಾಲನೆ ಸಿಕ್ಕಿತು.

ಇಂದಿನಿಂದ ಫೆ.25ತನಕ ಉರೂಸ್ ಕಾರ್ಯಕ್ರಮಕ್ಕೆ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಧ್ವಜಾರೋಹಣಗೈಯುವ ಮೂಲಕ ಚಾಲನೆ ನೀಡಿದರು.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಮಿತ್ತಬೈಲ್ ಉಸ್ತಾದ್ ದುಆಗೈದರು. ಕಣ್ಣೂರು ಬದ್ರಿಯ ಜುಮಾ ಮಸೀದಿಯ ಮುದರ್ರಿಸ್ ಅನ್ಸಾರ್ ಫೈಝಿ ಬುರ್ಹಾನಿ, ಕಣ್ಣೂರಿನ ಎಸ್‌ವೈಎಸ್ ಶರೀಅತ್ ಕಾಲೇಜಿನ ಪ್ರಾಂಶುಪಾಲ ಇಸ್ಮಾಯೀಲ್ ಮದನಿ, ಕಣ್ಣೂರು ಬದ್ರಿಯ ಜುಮಾ ಮಸೀದಿ ಯ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ ರಹ್ಮಾನ್, ಉಪಾಧ್ಯಕ್ಷ ಹಾಜಿ ಕೆ.ಎಸ್ .ಹಮೀದ್, ಕೋಶಾಧಿಕಾರಿ ಹಾಜಿ ಕೆ.ಬಿ.ಅಬ್ದುಲ್ ರಹ್ಮಾನ್, ಲೆಕ್ಕ ಪರಿಶೋಧಕ ಹಾಜಿ ಡಿ.ಎಂ.ಮುಹಮ್ಮದ್, ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಎ.ಕೆ., ಮಾಜಿ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ ಖಾದರ್, ಮಂಗಳೂರು ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಹಮೀದ್ ಹಾಜಿ, ಉದ್ಯಮಿಗಳಾದ ಅದ್ದು ಹಾಜಿ, ಎಚ್.ಬಿ.ಟಿ.ಅಬ್ದುಲ್ ಸಮದ್ ಮೊದಲಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News