ನನಗೆ, ಕುಟುಂಬ ಸದಸ್ಯರಿಗೆ ಕೊಲೆ ಬೆದರಿಕೆಯಿದೆ

Update: 2018-02-18 17:52 GMT

ಹ್ಯೂಸ್ಟನ್ (ಅಮೆರಿಕ), ಫೆ. 18: ಇತ್ತೀಚೆಗೆ ತನಗೆ ಹಾಗೂ ತನ್ನ ಕುಟುಂಬ ಸದಸ್ಯರಿಗೆ ಕೊಲೆ ಬೆದರಿಕೆಗಳನ್ನು ಹಾಕಲಾಗಿದೆ ಎಂದು ಅಮೆರಿಕದ

ನ್ಯೂಜೆರ್ಸಿ ರಾಜ್ಯದ ಹೊಬೊಕನ್ ನಗರದ ಪ್ರಥಮ ಸಿಖ್ ಮೇಯರ್ ಭಾರತೀಯ ಅಮೆರಿಕನ್ ರವೀಂದರ್ ಭಲ್ಲಾ ಹೇಳಿದ್ದಾರೆ.

ಶುಕ್ರವಾರ ಸಿಟಿ ಹಾಲ್‌ನಲ್ಲಿ ಭದ್ರತಾ ಲೋಪವುಂಟಾದ ಬಳಿಕ ಹೇಳಿಕೆಯೊಂದನ್ನು ನೀಡಿದ ಭಲ್ಲಾ, ಸಿಟಿ ಹಾಲ್‌ನ ಭದ್ರತೆಯನ್ನು ಹೆಚ್ಚಿಸಲು ಎಫ್‌ಬಿಐಯ ಜಂಟಿ ಭಯೋತ್ಪಾದನೆ ನಿಗ್ರಹ ಕಾರ್ಯ ಪಡೆ ಜೊತೆ ನಗರವು ಸಹಕಾರದಿಂದ ಕೆಲಸ ಮಾಡುತ್ತಿದೆ ಎಂದರು.

‘‘ಈ ಘಟನೆ ಹಾಗೂ ನನಗೆ ಮತ್ತು ನನ್ನ ಕುಟುಂಬ ಸದಸ್ಯರಿಗೆ ಬಂದಿರುವ ಕೊಲೆ ಬೆದರಿಕೆಗಳ ಹಿನ್ನೆಲೆಯಲ್ಲಿ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯ ಉಂಟಾಗಿರುವುದು ದುರದೃಷ್ಟಕರವಾಗಿದೆ’’ ಎಂದು ಭಲ್ಲಾ ಹೇಳಿದರು. ಆದಾಗ್ಯೂ, ಬೆದರಿಕೆಯ ವಿವರಗಳನ್ನು ಅವರು ನೀಡಲಿಲ್ಲ.

ಶುಕ್ರವಾರ ಸಿಟಿ ಹಾಲ್ ಪ್ರವೇಶಿಸಿದ ವ್ಯಕ್ತಿಯೊಬ್ಬ ತನಗೆ ಶೌಚಾಲಯಕ್ಕೆ ಹೋಗಬೇಕಾಗಿದೆ ಎಂದು ಹೇಳಿ ಕಚೇರಿ ಸಹಾಯಕರ ಮೇಜಿನ ಮೇಲೆ ಚೀಲವೊಂದನ್ನು ಎಸೆದು ಪರಾರಿಯಾಗಿದ್ದನು. ಅದರಲ್ಲಿ ಯಾವುದೋ ಆಯುಧವಿತ್ತು ಎಂದು ಹೇಳಲಾಗಿದೆ. ಆದರೆ, ಅದು ಯಾವುದು ಎನ್ನುವುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಆದರೆ, ಆ ಸಂದರ್ಭದಲ್ಲಿ ಭಲ್ಲಾ ಕಚೇರಿಯಲ್ಲಿ ಇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News