18 ವಿದ್ಯಾರ್ಥಿಗಳ 75 ಚಿತ್ರಕಲಾಕೃತಿಗಳ ಪ್ರದರ್ಶನ ಉದ್ಘಾಟನೆ
ಉಡುಪಿ, ಫೆ.19: ಉಡುಪಿ ಚಿತ್ರಕಲಾ ಮಂದಿರದ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಮಣಿಪಾಲ ಸ್ಕೂಲ್ ಆಫ್ ಆರ್ಟ್‌ನ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನವನ್ನು ಕೊಡವೂರು ಶ್ರೀ ಶಿರ್ಡಿಸಾಯಿ ಬಾಬಾ ಮಂದಿರದ ಧರ್ಮದರ್ಶಿ ದಿವಾಕರ ಶೆಟ್ಟಿ ತೋಟದ ಮನೆ ಸೋಮವಾರ ಉದ್ಘಾಟಿಸಿದರು.
ಕೊಡಂಕೂರು ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರಘುನಾಥ್ ಮಾಬೆನ್ ಮಾತನಾಡಿ, ಚಿತ್ರಕಲೆಗೆ ಭಾಷೆ ಎಂಬುದಿಲ್ಲ. ಎಲ್ಲ ಭಾಷೆಯಲ್ಲೂ ಅದು ಸಂವಹನ ಮಾಡುತ್ತದೆ. ಕಲಾವಿದ ರಚಿಸಿದ ಕಲಾಕೃತಿ ಆತನ ನಂತರವೂ ಮಾತನಾಡುತ್ತಿರುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಚಿತ್ರಕಲಾ ಮಂದಿರದ ನಿರ್ದೇಶಕ ಡಾ.ಯು.ಸಿ.ನಿರಂಜನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯ ರಾಘವೇಂದ್ರ ಕೆ.ಅಮೀನ್, ಉದ್ಯಮಿ ನಾರಾಯಣ ಆಚಾರ್ಯ ಉಪಸ್ಥಿತರಿದ್ದರು.
ಮಣಿಪಾಲ ಸ್ಕೂಲ್ ಆಫ್ ಆರ್ಟ್‌ನ ನಿರ್ದೇಶಕ ಪಿ.ಎನ್.ಆಚಾರ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಘ ಹೆಗಡೆ ವಂದಿಸಿದರು. ಕಲಾವಿದೆ ಡಾ.ಗುಣಸಾಗರಿ ರಾವ್ ಕಾರ್ಯಕ್ರಮ ನಿರೂಪಿಸಿದರು.
ಇಲ್ಲಿ ಸ್ಕೂಲ್‌ನ ಒಟ್ಟು 18 ವಿದ್ಯಾರ್ಥಿಗಳ ಒಟ್ಟು 75 ಚಿತ್ರಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಈ ಪ್ರದರ್ಶನವು ಪ್ರತಿದಿನ ಬೆಳಗ್ಗೆ 10ಗಂಟೆಯಿಂದ ಸಂಜೆ ಆರು ಗಂಟೆಯರೆಗೆ ಸಾರ್ವಜನಿಕ ವೀಕ್ಷಣೆಗೆ ಲಭ್ಯ.