ಉಡುಪಿ ನಗರಸಭೆಗೆ ವಿಶಿಷ್ಟ ಪ್ರಶಸ್ತಿ

Update: 2018-02-19 14:22 GMT

ಉಡುಪಿ, ಫೆ.19: ಉಡುಪಿ ನಗರಸಭೆ ಬೀಡಿನಗುಡ್ಡೆಯಲ್ಲಿ ನಿರ್ಮಿಸಿದ 2 ಟನ್ ಸಾಮರ್ಥ್ಯದ ಬಯೋಮಿಥನೇಶನ್ ಘಟಕ (ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ) ಉಪಕ್ರಮಕ್ಕೆ ತ್ಯಾಜ್ಯದಿಂದ ಉತ್ಪಾದನೆಯಾದ ಗ್ಯಾಸ್‌ನಿಂದ ವಿದ್ಯುತ್ ಉತ್ಪಾದನೆಯನ್ನು ವ್ಯವಸ್ಥಿತವಾಗಿ ಅನುಷ್ಟಾನಗೊಳಿಸಿರುವುದನ್ನು ಗುರುತಿಸಿ, ಉತ್ತಮ ಪದ್ಧತಿಗಳ ಅನುಸರಣೆಗಾಗಿ 2016-17ನೇ ಸಾಲಿನಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮ ನಿರ್ವಹಣೆಗೆ -ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ- ರಾಜ್ಯ ಪೌರಾಡಳಿತ ನಿರ್ದೇಶನಾಲಯವು ಬೆಂಗಳೂರಿನಲ್ಲಿ ಫೆ.17ರಂದು ನಡೆದ ಸಮಾರಂದಲ್ಲಿ ವಿಶಿಷ್ಟ ಪ್ರಶಸ್ತಿಯನ್ನು ಉಡುಪಿ ನಗರಸಭೆಗೆ ಪ್ರದಾನ ಮಾಡಿದೆ.

ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಪೌರಾಯುಕ್ತ ಡಿ.ಮಂಜುನಾಥಯ್ಯ ಹಾಗೂ ಪರಿಸರ ಅಭಿಯಂತರ ರಾಘವೇಂದ್ರ ಬಿ. ಎಸ್. ಅವರು ರಾಜ್ಯ ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಈಶ್ವರ ಬಿ ಖಂಡ್ರೆ ಇವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಕಾರ್ಯದರ್ಶಿ ಅಂಜುಂ ಪರ್ವೇಜ್ ಹಾಗೂ ಪೌರಾಡಳಿತ ನಿರ್ದೇಶಕ ವಿಶಾಲ್ ಆರ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News