×
Ad

ಕಾರ್ಕಳ: ಮನೆಯ ಕಂಬಕ್ಕೆ ದಂಪತಿಯನ್ನು ಕಟ್ಟಿ ಹಾಕಿ ಸೊತ್ತು ದರೋಡೆಗೈದ ತಂಡ

Update: 2018-02-19 20:16 IST

ಕಾರ್ಕಳ, ಫೆ.19: ಇಲ್ಲಿಗೆ ಸಮೀಪದ ದುರ್ಗಾ ಎಂಬಲ್ಲಿ ಫೆ.18ರಂದು ರಾತ್ರಿ 8ಗಂಟೆ ಸುಮಾರಿಗೆ ಮನೆಯೊಂದಕ್ಕೆ ನುಗ್ಗಿದ ಐದು ಮಂದಿಯ ತಂಡ ದಂಪತಿ ಯನ್ನು ಕಟ್ಟಿ ಹಾಕಿ ಚೂರಿಯಿಂದ ಇರಿದು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ದರೋಡೆ ಮಾಡಿರುವ ಬಗ್ಗೆ ವರದಿಯಾಗಿದೆ.

ದುರ್ಗಾ ನಿವಾಸಿ ವಸಂತ ಪಾಟಕ್ ಎಂಬವರ ಮನೆಗೆ ನುಗ್ಗಿದ ಐದು ಮಂದಿಯ ತಂಡ ಅವರ ಪತ್ನಿ ಹೇಮಲತಾ ಪಾಟಕ್‌ರನ್ನು ಹಿಡಿದು ಮುಖಕ್ಕೆ ಬಟ್ಟೆಯಿಂದ ಮುಸುಕು ಹಾಕಿ, ಕೈಗಳನ್ನು ಕಟ್ಟಿ ಹಾಕಿದರು. ಬಳಿಕ ಮನೆಯ ಛಾವಡಿಯ ಕಂಬಕ್ಕೆ ಅವರನ್ನು ಕಟ್ಟಿ ಹಾಕಿ ಕೈಯಿಂದ ಹಲ್ಲೆ ಮಾಡಿ ಚೂರಿಯಿಂದ ಹೆದರಿಸಿ ಹಣ ಹಾಗೂ ಒಡವೆ ನೀಡುವಂತೆ ಬೆದರಿಕೆ ಹಾಕಿದರು.

ಅಲ್ಲಿಂದ ವಸಂತ ಪಾಟಕ್ ಇದ್ದ ಕೊಠಡಿಗೆ ಹೋದ ದರೋಡೆಕೋರರು ಅವರಿಗೂ ಹೆದರಿಸಿ ಚೂರಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದರೆನ್ನಲಾಗಿದೆ. ನಂತರ ವಸಂತ ಪಾಟಕ್‌ರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಲುಂಗಿಯಿಂದ ಕೈಗಳನ್ನು ಕಟ್ಟಿ ಹಾಕಿದರು. ಮನೆಯಲ್ಲಿದ್ದ ಮೂರು ಮೊಬೈಲ್, 4 ಹಳೆಯ ವಾಚ್‌ಗಳು, ಬೆಳ್ಳಿಯ ಚೆಂಬು, 28000 ನಗದು ಸೇರಿದಂತೆ ಒಟ್ಟು 49ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ದರೋಡೆ ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News