ಫೆ.20ರಿಂದ ಓಲೆಮುಂಡೋವು ಉರೂಸ್ ಸಮಾರಂಭ
ಪುತ್ತೂರು,ಫೆ.19: ಓಲೆಮುಂಡೋವು ವಲಿಯುಲ್ಲಾಹಿ ಮಶ್‍ಹೂರ್ ದರ್ಗಾ ಶರೀಫ್‍ನಲ್ಲಿ 3 ವರ್ಷಕ್ಕೊಮ್ಮೆ ನಡೆಯುತ್ತಿರುವ ಉರೂಸ್ ಸಮಾರಂಭ ಫೆ.20-25ರ ತನಕ ನಡೆಯಲಿದೆ ಎಂದು ಸಮಿತಿಯ ಸಲಹಾ ಸಮಿತಿ ಸದಸ್ಯ ಖಲಂದರ್ ಶಾಫಿ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೆ.20ರಂದು ಓಲೆಮುಂಡೋವು ಜುಮ್ಮಾ ಮಸೀದಿ ಖತೀಬ್ ಅಸ್ಸಯ್ಯಿದ್ ಸೈಯದಲವಿ ತಂಙಳ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಲ್ಕಾಡ್ ಅಧ್ಯಕ್ಷತೆ ವಹಿಸಲಿದ್ದಾರೆ. ಇ.ಪಿ. ಅಬೂಬಕ್ಕರ್ ಅಲ್ ಖಾಸಿಮಿ ಪತ್ತನಾಪುರಂ ಮುಖ್ಯ ಪ್ರಭಾಷಣ ನೀಡಲಿದ್ದಾರೆ.
ಫೆ. 21ರಂದು ಎ.ಎಂ. ನೌಶದ್ ಬಾಖವಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಫೆ.22ರಂದು ಸ್ವಲಾತ್ ಮಜ್ಲಿಸ್ ನಡೆಯಲಿದ್ದು, ಅಸ್ಸಯ್ಯದ್ ಹಾದಿ ತಂಙಳ್ ಮೊಗ್ರಾಲ್ ಕಾಸರಗೋಡು ಉದ್ಘಾಟನೆ ಮತ್ತು ದುವಾ ನೆರವೇರಿಸಲಿದ್ದಾರೆ. ರಫೀಕ್ ಸಅದಿ ದೇಲಂಪಾಡಿ ಮುಖ್ಯ ಪ್ರಭಾಷಣ ನೀಡಲಿದ್ದಾರೆ.
ಫೆ.23ರಂದು ಮಜ್ಲಿಸುನ್ನೂರ್ ಕಾರ್ಯಕ್ರಮವನ್ನು ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಅಲಿ ಅಕ್ಬರ್ ಬಾಖವಿ ತಾನಿಯಪುರಂ ಮುಖ್ಯ ಪ್ರಭಾಷಣ ಮಾಡಲಿದ್ದರೆ. ಫೆ. 24ರಂದು ಹಲ್ಕಾ ದ್ಸಿಕ್ರ್ ಕಾರ್ಯಕ್ರಮವನ್ನು ಅಸ್ಸಯ್ಯದ್ ಅಬ್ಬಾಸಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸಿ ದುವಾ ನಡೆಸಲಿದ್ದಾರೆ. ಖಲೀಪ್ ಹುದವಿ ಅಲ್ ಮಾಲಿಕಿ ಕಾಸರಗೋಡು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಫೆ. 25ರಂದು ಸೌಹಾರ್ಧ ಸಂಗಮ ಹಾಗೂ ಉರೂಸ್ ಸಮಾರೋಪ ನಡೆಯಲಿದ್ದು, ಈ ಸಂದರ್ಭದಲ್ಲಿ ದರ್ಗಾಕ್ಕೆ ಜಾಗ ದಾನವಾಗಿ ನೀಡಿದ ಓಲೆಮುಂಡೋವು ಮೋಹನ್ ರೈ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಸಚಿವರಾದ ಬಿ. ರಮಾನಾಥ ರೈ, ಯು.ಟಿ.ಖಾದರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕಿ ಶಕುಂತಳಾ ಶೆಟ್ಟಿ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಬ್ದುರ್ರಶೀದ್ ಝೈನಿ ಖಾಮಿಲ್ ಸಖಾಫಿ ಮತ್ತು ಅನೀಸ್ ಕೌಸರಿ ಕುಂಬ್ರ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಅಸ್ಸಯ್ಯದ್ ಎನ್‍ಪಿಎಂ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ದುವಾ ನೆರವೇರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಕಾರ್ಯದರ್ಶಿ ಇಸ್ಮಾಯಿಲ್ ಮುಸ್ಲಿಯಾರ್, ಸಂಚಾಲಕ ಹಂಝ ಎಲಿಯ, ವಲಿಯುಲ್ಲಾಹಿ ಇಸ್ಲಾಮಿಕ್ ಅಕಾಡಮಿ ಅಧ್ಯಕ್ಷ ಉಮ್ಮರ್ ಮುಸ್ಲಿಯಾರ್ ಉಪಸ್ಥಿತರಿದ್ದರು.