×
Ad

ಮರ ಸೈಜುಗಳ ಪೂರೈಕೆ : ಆಸಕ್ತರಿಗೆ ಆಹ್ವಾನ

Update: 2018-02-19 20:40 IST

ಮಂಗಳೂರು, ಫೆ. 19: ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮವು ಖಾಸಗಿ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳ ಬೇಡಿಕೆಗಳಿಗನುಗುಣವಾಗಿ ಸೀಗಿದ ಮರಗಳ ಸೈಜುಗಳನ್ನು ಪೂರೈಕೆ ಮಾಡಲು ಸಾಗುವಾನಿ ಮರವು ಸೇರಿದಂತೆ ವಿವಿಧ ಜಾತಿಯ ಮರಗಳ ಸೈಜುಗಳನ್ನು ಪೂರೈಕೆ ಮಾಡಲಾಗುತ್ತದೆ. ಆಸಕ್ತಿ ಹೊಂದಿರುವ 1 ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟು ಮಾಡುವ ಸಾಮಿಲ್ ಮಾಲಕರಿಂದ ಬೇಡಿಕೆಗನುಸಾರವಾಗಿ ಸಾಗುವಾನಿ ಮರವು ಸೇರಿದಂತೆ ವಿವಿಧ ಜಾತಿಯ ಮರಗಳ ಸೈಜುಗಳನ್ನು ನಿಗಮಕ್ಕೆ ಪೂರೈಕೆ ಮಾಡಲು ಬಯಸಿದ್ದಲ್ಲಿ, ಅವರುಗಳ ಪ್ರೊಫೈಲನ್ನು ಫೆ. 28 ಒಳಗಾಗಿ ಸಲ್ಲಿಸಬಹುದಾಗಿದೆ.

ಪ್ರೊಫೈಲ್‌ನ್ನು ಸಲ್ಲಿಸುವ ಸಾಮಿಲ್ ಮಾಲಕರಲ್ಲಿ ಕನಿಷ್ಠ 100 ಘ.ಮೀ. ಸಾಗುವಾನಿ ಮರ ಹಾಗೂ 200 ಘ.ಮೀ. ಇತರ ಜಾತಿಯ ಮರಗಳು ದಾಸ್ತಾನು ಇರಬೇಕು. ಹೆಚ್ಚಿನ ಮಾಹಿತಿಗಳಿಗಾಗಿ ಪಡೀಲ್‌ನಲ್ಲಿರುವ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಕಚೇರಿಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News