ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ವಾಯು ದಾಳಿ

Update: 2018-02-19 17:11 GMT

ಗಾಝಾ ಸಿಟಿ, ಫೆ. 19: ಇಸ್ರೇಲ್ ಯುದ್ಧ ವಿಮಾನಗಳು ಸೋಮವಾರ ಮುಂಜಾನೆ ಗಾಝಾ ಪಟ್ಟಿಯಲ್ಲಿರುವ ಹಮಾಸ್ ನೆಲೆಗಳ ಮೇಲೆ ದಾಳಿಗಳನ್ನು ನಡೆಸಿದವು.

ಫೆಲೆಸ್ತೀನ್ ನೆಲದಿಂದ ಹಾರಿಸಲಾದ ರಾಕೆಟೊಂದು ದಕ್ಷಿಣ ಇಸ್ರೇಲ್‌ಗೆ ಅಪ್ಪಳಿಸಿದ ಬಳಿಕ ಇಸ್ರೇಲ್ ಸೇನೆ ಈ ಪ್ರತೀಕಾರಾತ್ಮಕ ಕಾರ್ಯ ಕೈಗೊಂಡಿದೆ ಎಂದು ಅಲ್ಲಿನ ಸೇನೆ ತಿಳಿಸಿದೆ.

ಗಾಝಾ ಪಟ್ಟಿಯ ದಕ್ಷಿಣದಲ್ಲಿರುವ ರಫಾದ ಪೂರ್ವ ಭಾಗದಲ್ಲಿರುವ ಹೊಲಗಳಿಗೆ ಹಲವಾರು ಕ್ಷಿಪಣಿಗಳು ಅಪ್ಪಳಿಸಿದವು ಎಂದು ಫೆಲೆಸ್ತೀನ್ ಭದ್ರತಾ ಮೂಲಗಳು ಹೇಳಿವೆ.

ಎರಡೂ ಘಟನೆಗಳಲ್ಲಿ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ವಾರಾಂತ್ಯದಲ್ಲಿ ಇಸ್ರೇಲ್ ಸೇನೆ ಮತ್ತು ಫೆಲೆಸ್ತೀನ್ ಪ್ರತಿಭಟನಕಾರರ ನಡುವೆ ಭೀಕರ ಸಂಘರ್ಷ ನಡೆದ ಬಳಿಕ ಈ ವಾಯು ದಾಳಿ ನಡೆದಿದೆ. ಆ ಸಂಘರ್ಷದಲ್ಲಿ ಇಬ್ಬರು ಫೆಲೆಸ್ತೀನೀಯರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News