ಡಿಜಿಟಲ್ ವ್ಯವಸ್ಥೆಯಿಂದ ಕ್ಷಣಕ್ಷಣ ಬದುಕಿನಲ್ಲಿ ಬದಲಾವಣೆ :ಡಾ.ಎನ್.ಕೆ.ತಿಂಗಳಾಯ

Update: 2018-02-19 17:20 GMT

ನಿಟ್ಟೆ, ಫೆ.19: ಡಿಜಿಟಲೀಕರಣ ಎಂದರೆ ಮೆಷಿನ್‌ಗಳು ಮನುಷ್ಯರಂತೆ ವರ್ತಿಸುವುದಾಗಿದೆ. ಮೆಷಿನ್‌ಗಳಲ್ಲಿ ಮನುಷ್ಯನ ಸಂಸ್ಕರಣಾ ಕೌಶಲ್ಯವಿದೆ. ಡಿಜಿಟಲೀಕರಣದಿಂದ ಮನುಷ್ಯನ ಹಸ್ತಕ್ಷೇಪವಿಲ್ಲದೇ ಬದುಕು ಕ್ಷಣ ಕ್ಷಣವೂ ಬದಲಾಗುತ್ತಿರುತ್ತದೆ ಎಂದು ಸಿಂಡಿಕೇಟ್ ಬ್ಯಾಂಕಿನ ಮಾಜಿ ಸಿಎಂಡಿ ಹಾಗೂ ನಿಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಶೈಕ್ಷಣಿಕ ಮಂಡಳಿಯ ಅಧ್ಯಕ್ಷ ಡಾ.ಎನ್.ಕೆ.ತಿಂಗಳಾಯ ಹೇಳಿದ್ದಾರೆ.

ಸಂಸ್ಥೆಯ ವತಿಯಿಂದ ಎರಡು ದಿನಗಳ ಕಾಲ ಉದ್ದಮೆಯ ಸಿಇಒಗಳಿಗೆ ಆಯೋಜಿಸಲಾದ ‘ಡಿಜಿಟಲ್ ಅರ್ಥ ವ್ಯವಸ್ಥೆಯಲ್ಲಿ ವ್ಯವಹಾರ ನಿರ್ವಹಣೆ-ಅವಕಾಶಗಳು ಹಾಗೂ ಸವಾಲುಗಳು’ ವಿಷಯದ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಈ ಹೊಸ ವ್ಯವಸ್ಥೆಗೆ ನಾವು ಹೊಂದಿಕೊಂಡು ಹೊಸ ಕೌಶಲ್ಯ, ಜ್ಞಾನ, ಮನೋಧರ್ಮವನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದವರು ಹೇಳಿದರು.

ಸಮಾವೇಶದಲ್ಲಿ ಆ್ಯಕ್ಸಿಸ್ ಕ್ಯಾಪಿಟಲ್‌ನ ಉಪ ಸಿಇಒ ಅನಿರ್ಬನ್ ಚಕ್ರವರ್ತಿ, ಡಿಎಕ್ಸ್‌ಸಿ ಟೆಕ್ನಾಲಡಿಯ ಎಂಡಿ ಶ್ರೀಕಾಂತ್ ಎ.ಕೆ. ಅಲ್ಲದೇ ವಿವಿಧ ಉದ್ಯಮ ಸಂಸ್ಥೆಗಳ ಉನ್ನತ ಅಧಿಕಾರಿಗಳಾದ ಸಂಯುಕ್ತ ಶ್ರೀಧರನ್, ಕಿಶೋರ್ ಜಾಗೀರ್‌ದಾರ್, ಸುಧೀರ್ ಮಧುಗಿರಿ, ಕೆ.ಮಂಜು, ರೇಣು ಜಯರಾಮ್, ಪ್ರಸನ್ನ ರಾವ್, ಶಂಕರ್ ಸುಂದರ್‌ರಾಮ್ ಉಪಸ್ಥಿತರಿದ್ದರು.

ನಿಟ್ಟೆ ಸಂಸ್ಥೆಯ ನಿರ್ದೇಶಕ ಡಾ.ಕೆ.ಶಂಕರನ್, ನಿಟ್ಟೆ ಎನ್‌ಎಂಎಎಂಐಟಿಯ ಪ್ರಿನ್ಸಿಪಾಲ್ ಡಾ.ನಿರಂಜನ್ ಎನ್.ಚಿಪ್ಳುಣಕರ್, ಡಾ.ಎನ್.ಎಸ್.ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ.ಎ.ಪಿ.ಆಚಾರ್ ಸ್ವಾಗತಿಸಿದರೆ, ಡಾ.ಸುಧೀರ್‌ರಾಜ್ ಕೆ. ಹಾಗೂ ಗುರುಪ್ರಶಾಂತ್ ಭಟ್ ಕಾರ್ಯಕ್ರಮ ಸಂಯೋಜಿಸಿದರೆ, ದೀಪಶ್ರೀ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News