ಮಂಗಳೂರು: ಫೆ.21ರಿಂದ ರಸ್ತೆ ಸಂಚಾರ ಸಮೀಕ್ಷೆ

Update: 2018-02-19 17:54 GMT

ಮಂಗಳೂರು, ಫೆ. 19: 2018ನೆ ಸಾಲಿನ ರಸ್ತೆ ಸಂಚಾರ ಸಮೀಕ್ಷೆಯು ಫೆ.21ರಂದು ಬೆಳಗ್ಗೆ 6 ಗಂಟೆಯಿಂದ ಫೆ.23ರ ಬೆಳಗ್ಗೆ 6 ಗಂಟೆಯವರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಆಯ್ದ ಸ್ಥಳಗಳಲ್ಲಿ ನಡೆಯಲಿದೆ.

ಸಮೀಕ್ಷಾ ಕಾರ್ಯ ನಡೆಯುವ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ಈ ಸಮೀಕ್ಷಾ ಕೇಂದ್ರಗಳಲ್ಲಿ ಒಂದು ನಿಮಿಷ ವಾಹನ ನಿಲ್ಲಿಸುವ ಮೂಲಕ ವಾಹನ ಚಾಲಕರು ಮತ್ತು ಸಾರ್ವಜನಿಕರು ರಸ್ತೆ ಸಂಚಾರ ಸಮೀೀಕ್ಷೆಗೆ ಸಹಕರಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News