ಏಣಿತ್ತಡ್ಕ: ಅಕ್ರಮ ಮರಳು ಅಡ್ಡೆಗೆ ದಾಳಿ‌; ಮೂರು ನಾಡದೋಣಿ, ಟಿಪ್ಪರ್, ಪಿಕಪ್ ಸೇರಿ ಮೂವರು ವಶ

Update: 2018-02-21 13:40 GMT

ಕಡಬ, ಫೆ. 21. ಅಕ್ರಮ ಮರಳು ಅಡ್ಡೆಗೆ ದಾಳಿ‌ ನಡೆಸಿರುವ ಅಧಿಕಾರಿಗಳು ಮೂರು ನಾಡದೋಣಿ, ಒಂದು ಟಿಪ್ಪರ್, ಒಂದು ಪಿಕಪ್ ವಾಹನ ಹಾಗೂ ಮರಳು ತೆಗೆಯಲು ಉಪಯೋಗಿಸುತ್ತಿದ್ದ ಕೆಲವು ಸಾಮಗ್ರಿಗಳು ಸೇರಿ ಮೂವರನ್ನು ವಶಕ್ಕೆ ಪಡೆದ ಘಟನೆ ಬುಧವಾರ ಕುಮಾರಧಾರಾ ನದಿಯ ಏಣಿತ್ತಡ್ಕ ಎಂಬಲ್ಲಿ ನಡೆದಿದೆ.

ಕಡಬ ತಾಲೂಕಿನ ಕೊಯಿಲ ಗ್ರಾಮದ ಏಣಿತಡ್ಕ ಎಂಬಲ್ಲಿ ಕುಮಾರಧಾರ ನದಿಯ ಅಂಚಿನಲ್ಲಿ ಯತೀಶ್ ಗೌಡ ಎಂಬವರಿಗೆ ಸೇರಿದ ರ್ಯಾಂಪ್ ನಲ್ಲಿ ಅಕ್ರಮವಾಗಿ ಮರಳು ತೆಗೆಯುತಿದ್ದ ಬಗ್ಗೆ ಖಚಿತ ವರ್ತಮಾನದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ. ಬಿ.ಆರ್. ರವಿಕಾಂತೇ ಗೌಡ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಸುನಿಲ್. ವೈ ನಾಯ್ಕ್ ಹಾಗೂ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಾಲ್ ನಾಯ್ಕ್ ಮತ್ತು ಕಡಬ ಠಾಣೆ ಉಪ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿ ದಾಳಿ‌ ನಡೆಸಿ ಆರೋಪಿಗಳಾದ ಅರುಣ್ (27), ಅಯ್ಯುಬ್ (37), ಅಬ್ದುಲ್ ಲತೀಫ್ (45) ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದು, ಮೂರು ನಾಡದೋಣಿ, ಒಂದು ಟಿಪ್ಪರ್, ಒಂದು ಪಿಕಪ್ ವಾಹನ ಹಾಗೂ ಮರಳು ತೆಗೆಯಲು ಉಪಯೋಗಿಸುತ್ತಿದ್ದ ಕೆಲವು ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 

ವಶಕ್ಕೆ ಪಡೆದುಕೊಂಡ ವಸ್ತುಗಳ ಒಟ್ಟು ಮೌಲ್ಯ 12 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಡಬ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News