ಪುತ್ತೂರು: ದೈವಸ್ಥಾನ ಜೀರ್ಣೋದ್ಧಾರಕ್ಕೆ ಮಸೀದಿ ಕಮಿಟಿಯಿಂದ ದೇಣಿಗೆ
ಪುತ್ತೂರು, ಫೆ. 21: ಪುತ್ತೂರು ತಾಲೂಕಿನ ಪಡುಮಲೆಯ ಪೂಮಾಣಿ-ಕಿನ್ನಿಮಾಣಿ (ಉಳ್ಳಾಕುಲು) ವ್ಯಾಘ್ರಚಾಮುಂಡಿ (ರಾಜನ್ ದೈವ) ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಫೆ. 23ರಿಂದ 25ರ ತನಕ ಇಲ್ಲಿ ಪುನರ್ ಪ್ರತಿಷ್ಠಾನ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಪಡುಮಲೆಯ ಜುಮಾ ಮಸೀದಿ ಕಮಿಟಿ ವತಿಯಿಂದ ಬುಧವಾರ 40,011 ರೂ. ನೆರವು ನೀಡುವ ಮೂಲಕ ಸೌಹಾರ್ದತೆ ಬೆಸೆದಿದ್ದಾರೆ.
ಪಡುಮಲೆ ಮಸೀದಿ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಬಡಗನ್ನೂರು, ಮಸೀದಿಯ ಧರ್ಮಗುರು ಸಂಶುದ್ದೀನ್ ದಾರಿಮಿ, ಮಸೀದಿಯ ಉಪಾಧ್ಯಕ್ಷ ಫಕ್ರುದ್ದೀನ್ ಹಾಜಿ, ಕೋಶಾಧಿಕಾರಿ ಆದಂ ಹಾಜಿ ಡೆಂಬಾಳೆ, ಕಾರ್ಯದರ್ಶಿ ಪಿ.ಬಿ. ಇಬ್ರಾಹೀಂ ಹಾಜಿ ಕೊಯಿಲ, ಕಮಿಟಿ ಸದಸ್ಯರಾದ ಆಲಿ ಕುಂಞಿ ಹಾಜಿ ಪಿಲಿಪುಡಿ, ಸೀದಿ ಹಾಜಿ ಕೊಯಿಲ ಮತ್ತಿತರರು ದೈವಸ್ಥಾನಕ್ಕೆ ತೆರಳಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರವಿರಾಜ್ ಶೆಟ್ಟಿ ಅಣಿಲೆ ಅವರ ಮೂಲಕ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಆರ್ಥಿಕ ನೆರವು ನೀಡಿದರು.
ದೇವಾಲಯದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳಾದ ರವಿರಾಜ್ ರೈ ಸಜಂಕಾಡಿ, ಜನಾರ್ದನ ಪೂಜಾರಿ ಪದಡ್ಕ, ದೇವಿ ಪ್ರಸಾದ್ ಕೆಸಿ, ಜಯರಾಜ್ ಶೆಟ್ಟಿ ಅಣಿಲೆ, ಪುರಂದರ ರೈ ಕುದ್ಕಾಡಿ, ವಿಶ್ವನಾಥ ಪೂಜಾರಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.