×
Ad

ಕರಾವಳಿ ಪೊಲೀಸ್ ಪಡೆಗೆ ಅರ್ಜಿ ಆಹ್ವಾನ

Update: 2018-02-21 21:21 IST

ಉಡುಪಿ, ಫೆ.21: ಉಡುಪಿ ಕರಾವಳಿ ಪೊಲೀಸ್ ಪಡೆಗೆ 5 ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳು: ಮೋಟಾರ್ ಲಾಂಚ್ ಇಂಜಿನಿಯರ್-1, ಬೋಟ್ ಕ್ಯಾಪ್ಟನ್-5, ಅಸಿಸ್ಟೆಂಟ್ ಕ್ಯಾಪ್ಟನ್-12, ಮೋಟಾರ್ ಲಾಂಚ್ ಮಿಶಿನ್-4, ಇಂಜಿನ್ ಡ್ರೈವರ್-12 ಹಾಗೂ ಖಾಲಸಿ-8 ಒಟ್ಟು 42 ಹುದ್ದೆಗಳು.

ಆಸಕ್ತರು, ನಿವೃತ್ತ ನೇವಿ/ ಕೋಸ್ಟ್ ಗಾರ್ಡ್ ಮತ್ತು ಬಿಎಸ್‌ಎಫ್ ವಾಟರ್‌ವಿಂಗ್ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮಾ. 19 ಕೊನೆಯ ದಿನವಾಗಿದೆ ಎಂದು ಉಡುಪಿ ಕರಾವಳಿ ಪೊಲೀಸ್ ಪಡೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News