ಫರಂಗಿಪೇಟೆ: ತಂಡದಿಂದ ಚೂರಿ ಇರಿತ; ಇಬ್ಬರಿಗೆ ಗಾಯ
Update: 2018-02-21 21:52 IST
ಬಂಟ್ವಾಳ, ಫೆ. 21: ತಂಡವೊಂದು ಇಬ್ಬರು ವ್ಯಕ್ತಿಗಳಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಫರಂಗಿಪೇಟೆಯ ಒಳಮಾರ್ಗದ ನದಿತಟದಲ್ಲಿ ಬುಧವಾರ ನಡೆದಿದೆ.
ಫರಂಗಿಪೇಟೆಯ ನಿವಾಸಿ ಇರ್ಫಾನ್ ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇನ್ನೋರ್ವನ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
ನದಿ ತಟದಲ್ಲಿ ಚಾಕು ಹಾಗೂ ರಕ್ತಸಿಕ್ತ ವಸ್ತುಗಳನ್ನು ಕಂಡ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಯಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.