ಫೆ.24ರಂದು ಅಜೆಕಾರು ಸಾಹಿತ್ಯ ಸಮ್ಮೇಳನ
Update: 2018-02-21 22:20 IST
ಹೆಬ್ರಿ, ಫೆ.21: ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ ವತಿಯಿಂದ ಅಜೆಕಾರು ಹೋಬಳಿ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆ.24ರಂದು ಶಿರ್ಲಾಲಿನ ನಾಲ್ಕೂರು ನರಸಿಂಗ ರಾವ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ ಎಂದು ಹೋಬಳಿ ಅಧ್ಯಕ್ಷ ಶೇಖರ ಅಜೆಕಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.