×
Ad

ಕಾಪು; ಮನೆಗೆ ನುಗ್ಗಿ ನಗ ನಗದು ಕಳವು

Update: 2018-02-21 22:57 IST

ಕಾಪು, ಫೆ.21: ಇಲ್ಲಿಗೆ ಸಮೀಪದ ಕೊಪ್ಪಲಂಗಡಿ ಎಂಬಲ್ಲಿ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

 ಕೊಪ್ಪಲಂಗಡಿಯ ನಸೀಮಾ ಬಾನು ಮನೆಗೆ ಬೀಗ ಹಾಕಿ ಫೆ.15ರಂದು ಉದ್ಯಾವರದಲ್ಲಿರುವ ಪ್ಲಾಟ್ಗೆ ಹೋಗಿದ್ದು, ಫೆ.20ರಂದು ಸಂಜೆ ಮನೆಗೆ ಬಂದು ನೋಡುವಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಮನೆಯ ಎದುರಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ರೂಮಿನ ಕಪಾಟಿನಲ್ಲಿಟ್ಟಿದ 24ಸಾವಿರ ರೂ. ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News