ಮಣಿಪಾಲ; ಕಟ್ಟಡದಿಂದ ಬಿದ್ದು ಇಲೆಕ್ಟ್ರೀಶಿಯನ್ ಮೃತ್ಯು
Update: 2018-02-21 23:02 IST
ಮಣಿಪಾಲ, ಫೆ.21: ಉಡುಪಿಯ ಸಗ್ರಿಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ 9ನೆ ಮಹಡಿಯಲ್ಲಿ ಇಲೆಕ್ಟ್ರೀಶಿಯನ್ ಕೆಲಸ ಮಾಡುತ್ತಿದ್ದ ಯುವಕ ನೋರ್ವ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಫೆ.20ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಬೈಂದೂರು ಶಿರೂರು ಕರಾವಳಿಯ ಪುಟ್ಟುಹಿತ್ಲು ನಿವಾಸಿ ಕೃಷ್ಣ ಮೊಗವೀರ ಎಂಬವರ ಪುತ್ರ ದೀಪಕ್(18) ಎಂದು ಗುರುತಿಸಲಾಗಿದೆ. ಇವರು ಉಡುಪಿಯ ಇಲೆಕ್ಟ್ರೀಕಲ್ ಗುತ್ತಿಗೆದಾರರ ಬಳಿ ಇಲೆಕ್ಟ್ರೀಶಿಯನ್ ಕೆಲಸ ಮಾಡಿಕೊಂಡಿದ್ದರು. ಸಗ್ರಿಯ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಒಂಬತ್ತನೆ ಮಹಡಿಯಲ್ಲಿ ಇಲೆಕ್ಟ್ರೀಶಿಯನ್ ಕೆಲಸ ಮಾಡಿ ಕೊಂಡಿದ್ದ ದೀಪಕ್ ಆಕಸ್ಮಿಕವಾಗಿ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.