ಸೋಮೇಶ್ವರ, ಉಚ್ಚಿಲ: ಫೆ.22ರಿಂದ ಸ್ವಲಾತ್ ವಾರ್ಷಿಕ, ವಿದ್ಯಾರ್ಥಿಗಳ ಕಾರ್ಯಕ್ರಮ
Update: 2018-02-21 23:23 IST
ಸೋಮೇಶ್ವರ ಉಚ್ಚಿಲ, ಫೆ. 21: ಸೋಮೇಶ್ವರ ಉಚ್ಚಿಲದಲ್ಲಿ 34ನೇ ಸ್ವಲಾತ್ ವಾರ್ಷಿಕ ಹಾಗೂ ದರ್ಸ್ ವಿದ್ಯಾರ್ಥಿಗಳ ವಾರ್ಷಿಕ ಕಾರ್ಯಕ್ರಮವು ಫೆ. 22ರಿಂದ 25ರ ವರೆಗೆ ರಾತ್ರಿ 8 ರಿಂದ ಉಚ್ಚಿಲ ಮಸೀದಿ ವಠಾರದಲ್ಲಿ ನಡೆಯಲಿದೆ.
ಫೆ. 22ರಂದು ಉದ್ಘಾಟನಾ ಸಮಾರಂಭ ಹಾಗೂ ದರ್ಸ್ ವಿದ್ಯಾರ್ಥಿಗಳ ಕಲಾ ಕಾರ್ಯಕ್ರಮ ನಡೆಯಲಿದೆ. ಅಸೈಯದ್ ಸಾದಾತ್ ತಂಙಳ್, ಗುರುವಾಯನಕೆರೆ ದುಆ ನೆರವೇರಿಸುವರು. ಎಂ.ಪಿ ಇಬ್ರಾಹಿಂ ಫೈಝಿ, ಉದ್ಯಾವರ ಉದ್ಘಾಟನೆ ಮಾಡಲಿದ್ದಾರೆ.
ಫೆ. 23ರಂದು ಬಿ.ಕೆ ಹಮೀದ್ ಫೈಝಿ ಕಿಲ್ಲೂರ್ ಕಿಲ್ಲೂರು, ಫೆ. 24ರಂದು ಅಬ್ದುಲ್ ಮಜೀದ್ ಬಾಖವಿ ತಲಂಗರ ಮುಖ್ಯ ಭಾಷಣ ಮಾಡಲಿದ್ದಾರೆ. ಫೆ. 25ರಂದು ದ್ಸಿಕ್ರ್ ಸ್ವಲಾತ್ ವಾರ್ಷಿಕ ಸಮಾರಂಭ ನಡೆಯಲಿದ್ದು, ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್ ನೇತೃತ್ವ ವಹಿಸುವರು.
ಮುಖ್ಯ ಅತಿಥಿಗಳಾಗಿ ಸಚಿವ ಯು.ಟಿ. ಖಾದರ್ ಹಾಗು ಇತರರು ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.