×
Ad

ದಿಲ್ಲಿಯ ಜಾಮಾ ಮಸೀದಿಗೆ ಭೇಟಿ ನೀಡಿದ ಕೆನಡಾ ಪ್ರಧಾನಿ, ಕುಟುಂಬ

Update: 2018-02-22 17:04 IST

ಹೊಸದಿಲ್ಲಿ, ಫೆ.22: ಪತ್ನಿ ಹಾಗು ಮಕ್ಕಳೊಂದಿಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ದಿಲ್ಲಿಯ ಜಾಮಾ ಮಸೀದಿಗೆ ಭೇಟಿ ನೀಡಿದರು. ಈ ಸಂದರ್ಭ ಕೆನಡಾ ರಕ್ಷಣಾ ಸಚಿವ ಹರ್ಜಿತ್ ಸಜ್ಜನ್ ಜೊತೆಗಿದ್ದರು.

ಸುಮಾರು 20 ನಿಮಿಷಗಳ ಕಾಲ ಅಲ್ಲಿದ್ದ ಟ್ರೂಡೋ ಹಾಗು ಕುಟುಂಬ ಸದಸ್ಯರು ಮಸೀದಿಯ ವಾಸ್ತುಶಿಲ್ಪವನ್ನು ವೀಕ್ಷಿಸಿದರು. ಕೆನಡಾ ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಜಾಮಾ ಮಸೀದಿಯನ್ನು ಸಂಪರ್ಕಿಸುವ ರಸ್ತೆಯನ್ನು ಟ್ರಾಫಿಕ್ ಮುಕ್ತ ಮಾಡಲಾಗಿತ್ತು. ಮಸೀದಿ ಆವರಣದಲ್ಲಿ ಭದ್ರತಾ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು.

ಪ್ರವೇಶ ದ್ವಾರದಲ್ಲೂ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News