×
Ad

ಮೊಯ್ದಿನ್ ಬಾವ ಸೀರೆ ಹಂಚುವ ಫೋಟೊ ವೈರಲ್: ವಿವಾದ

Update: 2018-02-22 17:19 IST

ಮಂಗಳೂರು, ಫೆ. 22: ಸುರತ್ಕಲ್ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಅವರು ಸೀರೆ ಹಂಚುತ್ತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಮೊಯ್ದಿನ್ ಬಾವ ಚುನಾವಣೆಗೆ ಮುನ್ನವೇ ವೋಟ್ ಬ್ಯಾಂಕಿಂಗ್ ಮಾಡುತ್ತಿದ್ದಾರೆಯೇ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರಶ್ನಿಸುತ್ತಿದ್ದು, ಅವರು ಕಾರ್ಯಕರ್ತರೊಂದಿಗೆ ಸೇರಿಕೊಂಡು ಸೀರೆ ಹಾಗು ಇತರ ವಸ್ತುಗಳನ್ನು ಹಂಚುತ್ತಿರುವ ಬಗ್ಗೆ ಆರೋಪ ಕೇಳಿ ಬರುತ್ತಿದೆ.

ಶಾಸಕ ಮೊಯ್ದಿನ್ ಬಾವ ಹಕ್ಕು ಪತ್ರ ವಿತರಣೆಯ ಸಂದರ್ಭದಲ್ಲೂ ಸೀರೆ ವಿತರಣೆ ಮಾಡಿದ್ದು, ಗುರುಪುರ ಮತ್ತು ವಾಮಂಜೂರಿನಲ್ಲಿ ಸೀರೆ ವಿತರಣೆ ಮಾಡಿದ್ದಾರೆ ಎಂದೂ ಹಲವರು ಆರೋಪ ಮಾಡಿದ್ದಾರೆ.

ಸೀರೆ ಹಂಚಿ ಮತದಾರರ ಖರೀದಿ ಮಾಡುವ ಸ್ಥಿತಿ ಮಂಗಳೂರಿಗೆ ಬರಬಾರದಿತ್ತು. ವ್ಯಾಪಾರಿಗಳು ಜನಪ್ರತಿನಿಧಿಗಳಾದರೆ, ಅವರಿಗೆ ಎಲ್ಲವೂ ಖರೀದಿಯ ವಸ್ತುಗಳೆ. ಎಲ್ಲವೂ ಲಾಭಗಳಿಕೆಯ ಉದ್ಯಮಗಳೆ

- ಮುನೀರ್ ಕಾಟಿಪಳ್ಳ, ಡಿವೈಎಫ್ಐ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News