ಕಣ್ಣೂರ್ ಸಿಪಿಎಂ ಕಾರ್ಯದರ್ಶಿ ಕಿಮ್ ಜಾಂಗ್ ಇದ್ದಂತೆ: ಕಾಂಗ್ರೆಸ್
Update: 2018-02-22 17:26 IST
ಕಣ್ನೂರ್,ಫೆ.22: ಸಿಪಿಎಂ ಕಣ್ಣೂರ್ ಜಿಲ್ಲಾಕಾರ್ಯದರ್ಶಿ ಪಿ. ಜಯರಾಜನ್ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಇದ್ದಂತೆ ಎಂದು ಕಾಂಗ್ರೆಸ್ ರಾಜಕೀಯ ಸಮಿತಿಯ ಸದಸ್ಯ ಕೆ. ಸುಧಾಕರನ್ ಹೇಳಿದ್ದಾರೆ. ಕಣ್ಣೂರನ್ನು ಅವರು ಉತ್ತರಕೊರಿಯ ಎಂದು ತಿಳಿದುಕೊಂಡಿದ್ದಾರೆ. ಎಲ್ಲವನ್ನೂ ನಿರ್ಧರಿಸುವುದು ಪಕ್ಷವೆಂದು ಜಯರಾಜನ್ ಹೇಳುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪಕ್ಷದ ಆಡಳಿತವನ್ನು ಹೇರಲು ಜಯರಾಜನ್ ಬಯಸುತ್ತಿದ್ದಾರೆ ಎಂದು ಸುಧಾಕರನ್ ಆರೋಪಿಸಿದರು.