×
Ad

ಜಯರಾಜನ್‍ರನ್ನು ಕೊಲ್ಲಲು ಯತ್ನಿಸಿದ ಸುಧಾಕರನ್ ಸತ್ಯಾಗ್ರಹ ಕೂತಿದ್ದಾರೆ: ಪಿಣರಾಯಿ ವಿಜಯನ್

Update: 2018-02-22 17:30 IST

ತೃಶೂರ್, ಫೆ.22: ಸಿಪಿಎಂ ಕೇಂದ್ರ ಕಮಿಟಿ ಸದಸ್ಯ ಇಪಿ ಜಯರಾಜನ್‍ರನ್ನು ಕೊಲ್ಲಲು ಯತ್ನಿಸಿದ ಸುಧಾಕರನ್ ಈಗ ಶುಹೈಬ್ ಕೊಲೆಯನ್ನು ಪ್ರತಿಭಟಿಸಿ ಸತ್ಯಾಗ್ರಹಕ್ಕೆ ಕೂತಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ತ್ರಿಶೂರಿನಲ್ಲಿ ಸಿಪಿಎಂ ರಾಜ್ಯ ಸಮ್ಮೇಳನದ ವೇದಿಕೆಯಲ್ಲಿ ಅವರು ಮಾತನಾಡುತ್ತಿದ್ದರು.

 ಸಿಪಿಎಂವಿರುದ್ಧ ಸಂಘಟಿತ ದಾಳಿ ಬಹಳ ವರ್ಷಗಳಿಂದ ನಡೆಯುತ್ತಾ ಬಂದಿದೆ. ಇಂತಹ ದಾಳಿಗೆ ಕೆಲವರು ಹುತಾತ್ಮರಾದರು. ಜೀವಗಳನ್ನು ತೆಗೆಯುವ ಮೂಲಕ ಹೋರಾಟದಿಂದ ಹಿಂಜರಿಯುವಂತೆ ಮಾಡಲು ಸಾಧ್ಯವಿಲ್ಲ. ಶತ್ರುಗಳೇ ಒಪ್ಪಿಕೊಳ್ಳುವಂತಹ ಯಶಸ್ಸಿನ ಪಥದಲ್ಲಿ ಈಗ ಸಿಪಿಎಂ ಮುಂದುವರಿಯುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News