ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಕೃತಿ ಕಾರ್ಯಕ್ರಮ
Update: 2018-02-22 19:23 IST
ಮಂಗಳೂರು, ಫೆ.22: ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಪ್ರಾಯೋಜಿತ ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜು ವತಿಯಿಂದ ರಾಜ್ಯಮಟ್ಟದ ಅಂತರ್ ಕಾಲೇಜು ತಾಂತ್ರಿಕ ಸಾಂಸ್ಕೃತಿಕ ಉತ್ಸವ ‘ಆಕೃತಿ-2018’ ಮಾ. 2, 3ರಂದು ಕಾಲೇಜಿನ ಆವರಣದಲ್ಲಿ ನಡೆಯಲಿದೆ.
ವಿದ್ಯಾರ್ಥಿಗಳಲ್ಲಿರುವ ಸ್ಪರ್ಧಾ ಮನೋಭಾವ ಹಾಗೂ ಸಾಧನೆಯ ಸ್ಫೂರ್ತಿಗೆ ವೇದಿಕೆಯಾಗುವ ಹಾಗೂ ಯುವ ಪೀಳಿಗೆಯ ಹೊಸತನದ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ‘ಆಕೃತಿ’ಯು 25ಕ್ಕೂ ಅಧಿಕ ವೈವಿಧ್ಯಮಯ ತಾಂತ್ರಿಕ ಸಾಂಸ್ಕೃತಿಕ ಸ್ಪರ್ಧೆಗಳನ್ನು ಒಳಗೊಂಡಿದೆ. ಸುಮಾರು 2,500 ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ನಿರೀಕ್ಷಿಸಲಾಗುತ್ತಿದ್ದು ಜಿಂದಾಲ್ ಪಾಲಿಫಿಲ್ಸ್ಮ್‌ನ ಮಾಜಿ ಕಾರ್ಯನಿವಾಹಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಐ.ಐ.ಚಂದ್ರಕಾಂತ್ ರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.