ಫೆ. 25: ಕೆಲಿಂಜ ಹಯಾತುಲ್ ಇಸ್ಲಾಂ ಮದ್ರಸದ ನೂತನ ಕಟ್ಟಡ ಉದ್ಘಾಟನೆ
ಬಂಟ್ವಾಳ, ಫೆ. 22: ಕೆಲಿಂಜ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಫೆ. 23ರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ನೂತನ ಕಟ್ಟಡದ ಉದ್ಘಾಟನೆ ಸಮಾರಂಭ ಫೆ. 25ರಂದು ನಡೆಯಲಿದೆ ಎಂದು ಕೆಲಿಂಜ ಮಸೀದಿ ಖತೀಬ್ ಅಬ್ಬಾಸ್ ದಾರಿಮಿ ಕೆಲಿಂಜ ತಿಳಿಸಿದ್ದಾರೆ.
ಅವರು ಗುರುವಾರ ವಿಟ್ಲದ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪಾಣಕ್ಕಾಡ್ ಸೈತದ್ ಹೈದರ್ ಅಲಿ ಶಿಹಾಬು ತಂಙಳ್ ಅಧ್ಯಕ್ಷತೆ ವಹಿಸುವರು. ಪ್ರವಾಸಿ ಮಹಿಳೆಯರ ನಮಾಜ್ ಕೊಠಡಿಯನ್ನು ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಉದ್ಘಾಟಿಸುವರು ಎಂದರು.
ಸಮಸ್ತ ಉಪಾಧ್ಯಕ್ಷ ಶೈಖುನಾ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ದುವಾಃ ಆಶೀರ್ವಚನ ನೀಡುವರು ಕೆಲಿಂಜ ಮಸೀದಿಯ ನೂತನ ಕಾಂಕ್ರಿಟ್ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ರಮಾನಾಥ ರೈ ಉದ್ಘಾಟಿಸಲಿದ್ದು, ಧರ್ಮಗುರುಗಳ ಕೊಠಡಿಯನ್ನು ಸಚಿವ ತನ್ವೀರ್ ಸೇಠ್ ಉದ್ಘಾಟಿಸುವರು ಹಾಗೂ ಅಬ್ದುಸ್ಸಮದ್ ಪೂಕೋಟೂರು ಮುಖ್ಯ ಪ್ರಭಾಷಣ ಮಾಡುವರು ಎಂದು ಮಾಹಿತಿ ನೀಡಿದರು.
ಆಹಾರ ಸಚಿವ ಯು.ಟಿ ಖಾದರ್, ಸೈಯದ್ ಝೈನುಲ್ ಅಬೀದಿನ್ ತಂಙಳ್, ಪುತ್ತೂರು ತಂಙಳ್, ಕುಕ್ಕಾಜೆ ತಂಙಳ್, ಮುಖ್ಯ ಸಚೇತಕ ಐವನ್ ಡಿಸೋಜ, ಪಾತೂರು ಉಸ್ತಾದ್ ಸೇರಿದಂತೆ ಇನ್ನೀತರ ಧಾರ್ಮಿಕ ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದ ಅವರು ಫೆ. 23 ರಿಂದ 25ರ ವರೆಗೆ ಕೇರಳದ ಪ್ರಸಿದ್ಧ ವಾಗ್ಮಿಗಳಾದ ಮಾಸ್ಟರ್ ಸ್ವಾಲಿಹ್ ಬತ್ತೇರಿ, ಹಾಫಿಲ್ ಶಮ್ಮೀಸ್ ಖಾನ್, ನಾಫೀ, ಹಾಫೀಲ್ ನಿಝಾಮುದ್ದೀನ್ ಅಲ್ ಅರ್ಹರಿಯವರು ಧಾರ್ಮಿಕ ಪ್ರವಚನ ನೀಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಲಿಂಜ ಮುಹಿಯುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಕರೀಂ ಕಂಪದಬೈಲು, ಕಾರ್ಯದರ್ಶಿ ಇಸ್ಮಾಯಿಲ್ ಮುನ್ನಾ, ಸ್ವಾಗತ ಸಮಿತಿ ಅಧ್ಯಕ್ಷ ಉಮರ್ ಗುಳಿಗುಡ್ಡೆ, ವೀರಕಂಭ ಗ್ರಾಪಂ ಉಪಾಧ್ಯಕ್ಷ ವಿ.ಕೆ ಅಬ್ಬಾಸ್, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸದಸ್ಯ ಶರೀಫ್ ಕೆಲಿಂಜ ಉಪಸ್ಥಿತರಿದ್ದರು.