ದ.ಕ.ಜಿಲ್ಲೆಯಲ್ಲಿ 4 ಸ್ಥಾನಗಳಿಗೆ ಮುಸ್ಲಿಂ ಲೀಗ್ ಸ್ಪರ್ಧೆ: ಹಾಜಿ ಸೈಯದ್ ಅಹ್ಮದ್ ಬಾಷಾ ತಂಙಳ್
ಮಂಗಳೂರು, ಫೆ.22: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮುಸ್ಲಿಂ ಲೀಗ್ 4 ಸ್ಥಾನಗಳಿಗೆ ಸ್ಪರ್ಧಿಸಲು ನಿರ್ಧರಿಸಿದ್ದು, ಈ ಬಗ್ಗೆ ಕೇಂದ್ರ ಸಮಿತಿಯನ್ನು ಒತ್ತಾಯಿಸಲಾಗುವುದು ಎಂದು ದ.ಕ.ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಾರ್ಲಿಮೆಂಟರಿ ಬೋರ್ಡ್ ಸದಸ್ಯ ಹಾಜಿ ಸೈಯದ್ ಅಹ್ಮದ್ ಬಾಷಾ ತಂಙಳ್ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಸುಳ್ಯ ಕಾಲೇಜಿನ ವಿದ್ಯಾರ್ಥಿನಿ ಅಕ್ಷಿತಾಳ ಹತ್ಯೆ ಖಂಡನೀಯ. ರಾಜ್ಯ ಸರಕಾರ ಅಕ್ಷಿತಾಳ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ನೀಡಬೇಕು.ಬೆಂಗ್ರೆಯಲ್ಲಿ ಹಿಂದೂ ಮುಸ್ಲಿಮರು ಭೇದ-ಭಾವಲ್ಲದೆ ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ. ಶತಮಾನಗಳಿಂದಲೂ ಸಂಘರ್ಷಣೆಯನ್ನು ಕಾಣದ ಈ ಪ್ರದೇಶಕ್ಕೆ ಧಕ್ಕೆಯಾಗಿದೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದರೊಂದಿಗೆ ಪೊಲೀಸರು ನಿರಪರಾಧಿಗಳನ್ನು ಬಂಧಿಸಬಾರದು ಎಂದು ಅವರು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಹಿಂದೆ ಮದ್ರಸಗಳಲ್ಲಿ ಭಯೋತ್ಪಾದನೆಯ ತರಬೇತಿ ನೀಡಲಾಗುತ್ತದೆ ಎಂಬ ಬೇಜವಬ್ದಾರಿ ಹೇಳಿಕೆ ನೀಡಿರುವು ದನ್ನು ರಾಜ್ಯದ ಜನತೆ ಮರೆತಿಲ್ಲ ಎಂದ ಅವರು, ದೇಶದ ಮುಸ್ಲಿಮರಿಗೆ ಶರೀಯತ್ ನಿಯಮ ಹಾಗೂ ಅದರ ವಿಧಿ ವಿಧಾನಗಳೇ ಶ್ರೇಷ್ಠವಾಗಿದ್ದು, ಭಾರತೀ ಯರೆಲ್ಲರನ್ನು ವಿಕಾಸದತ್ತ ಕೊಂಡೊಯ್ಯುವುದಾಗಿ ಭರವಸೆಯನ್ನು ನೀಡಿ ಕೇಂದ್ರದ ಅಧಿಕಾರಕ್ಕೇರಿದ ಬಿಜೆಪಿ ಪ್ರತೀಕಾರದ ಕಾನೂನಿನ ಮೂಲಕ ಮುಸ್ಲಿ ಮರ ದಮನಕ್ಕೆ ಯತ್ನಿಸುತ್ತಿರುವುದು ಖಂಡನೀಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.