×
Ad

ಬೆಂಗಳೂರಿನ ಮಹಿಳೆ ನಾಪತ್ತೆ

Update: 2018-02-22 22:22 IST

ಉಡುಪಿ, ಫೆ.22: ಬೆಂಗಳೂರಿನ ಹೇಸರಘಟ್ಟ ಸಿಲ್ಬೇಪುರದ ನಿವಾಸಿ ಭವಾನಿ (37) ಎಂಬವರು ಫೆ.16ರಂದು ಅವರ ಪತಿ ಎ.ಪಿ.ರಾಜ್ ಜೊತೆ ಚಿಕಿತ್ಸೆ ಗಾಗಿ ಮಣಿಪಾಲ ಆಸ್ಪತ್ರೆಗೆ ಬಂದವರು ಫೆ.17 ಸಂಜೆ 6:30ರಿಂದ ಕಾಣೆಯಾಗಿದ್ದಾರೆ.

ಗೋಧಿ ಮೈಬಣ್ಣ, ದುಂಡು ಮುಖ, ದೃಢಕಾಯ ಮೈಕಟ್ಟು, 5.5 ಅಡಿ ಎತ್ತರ ಹೊಂದಿರುವ ಇವರು ಕೆಂಪು ಬಣ್ಣದ ಚೂಡಿದಾರ ಧರಿಸಿದ್ದಾರೆ. ಕನ್ನಡ ಭಾಷೆಯನ್ನು ಮಾತನಾಡುತ್ತಾರೆ.

ಇವರನ್ನು  ಕಂಡಲ್ಲಿ ಮಣಿಪಾಲ ಠಾಣೆ: 0820-2570328 ಅಥವಾ ಪೊಲೀಸ್ ನಿರೀಕ್ಷಕರು ಮಣಿಪಾಲ ಠಾಣೆ: 9480805448 ಅಥವಾ ಪೊಲೀಸ್ ಉಪ ನಿರೀಕ್ಷಕರು ಮಣಿಪಾಲ ಠಾಣೆ: 9480805475 ಇವರಿಗೆ ಮಾಹಿತಿ ನೀಡುವಂತೆ ಮಣಿಪಾಲ ಪೊಲೀಸ್ ಠಾಣೆ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News