×
Ad

ಭ್ರಷ್ಟಾಚಾರ ಪ್ರಕರಣ: ನೆತನ್ಯಾಹು ವಿರುದ್ಧ ಬಲಗೈ ಬಂಟನಿಂದಲೇ ಸಾಕ್ಷ್ಯ?

Update: 2018-02-22 22:25 IST

ಜೆರುಸಲೇಂ, ಫೆ. 22: ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಸಾಕ್ಷ ಹೇಳಲು ಅವರ ಓರ್ವ ಬಲಗೈ ಬಂಟ ಒಪ್ಪಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.

ಇದು ಬೆಂಜಮಿನ್‌ರ ಸುದೀರ್ಘ ರಾಜಕೀಯ ಜೀವನಕ್ಕೆ ಹೊಸ ಬೆದರಿಕೆಯಾಗಿ ಪರಿಣಮಿಸಿದೆ.

ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಬೆಂಜಮಿನ್ ವಿಚಾರಣೆ ಎದುರಿಸಲಿದ್ದಾರೆ ಎಂಬುದಾಗಿ ಪೊಲೀಸರು ಪ್ರಕಟಿಸಿದ ದಿನಗಳ ಬಳಿಕ, ಅವರ ವಿರುದ್ಧ ಇನ್ನೆರಡು ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಯಲಿದೆ ಎಂದು ಈ ವಾರದ ಆದಿ ಭಾಗದಲ್ಲಿ ಘೋಷಿಸಲಾಗಿದೆ.

20 ವರ್ಷಗಳಿಗೂ ಅಧಿಕ ಅವಧಿಯ ನೆತನ್ಯಾಹು ಬಂಟ ಹಾಗೂ ಸಂಪರ್ಕ ಸಚಿವಾಲಯದ ಮಾಜಿ ಮಹಾ ನಿರ್ದೇಶಕ ಶ್ಲೋಮೊ ಫಿಲ್ಬರ್ ತಾನು ಜೈಲಿಗೆ ಹೋಗುವುದನ್ನು ತಪ್ಪಿಸಲು ನೆತನ್ಯಾಹು ವಿರುದ್ಧ ಸಾಕ್ಷ ಹೇಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News