×
Ad

ಮಂಗಳೂರು: ಕೇಂದ್ರ, ಜಾರ್ಖಂಡ್ ಸರಕಾರದ ವಿರುದ್ಧ ಪಿಎಫ್‌ಐ ಪ್ರತಿಭಟನೆ

Update: 2018-02-23 16:22 IST

ಮಂಗಳೂರು, ಫೆ. 23: ಜಾರ್ಖಂಡ್ ಸರಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದ ಕ್ರಮವನ್ನು ಖಂಡಿಸಿ ಪಿಎಫ್‌ಐ ದ.ಕ. ಜಿಲ್ಲಾ ಸಮಿತಿ ಶುಕ್ರವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಕೇಂದ್ರ ಮತ್ತು ಜಾರ್ಖಂಡ್ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನೆಕಾರರು ಪಿಎಫ್‌ಐ ರಾಷ್ಟ್ರ ವಿರೋಧಿ ಸಂಘಟನೆಯಲ್ಲ. ರಾಷ್ಟ್ರವಿರೋಧಿ ಕೃತ್ಯ ಎಸಗಿದ ಬಗ್ಗೆ ಯಾವುದೇ ಪುರಾವೆಯೂ ಇಲ್ಲ. ಆದರೆ ಜಾರ್ಖಂಡ್ ಸರಕಾರವು ಕೇಂದ್ರ ಸರಕಾರದ ಕುಮ್ಮಕ್ಕಿನಿಂದ ಇಂತಹ ನಿಲುವು ತಾಳಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭ ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಯಾಸಿರ್ ಹಸನ್, ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ದ.ಕ. ಜಿಲ್ಲಾ ಇಮಾಮ್ಸ್ ಕೌನ್ಸಿಲ್ ಅಧ್ಯಕ್ಷ ರಫೀಕ್ ದಾರಿಮಿ, ಪಿಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಖಾದರ್, ಜಿಲ್ಲಾ ಸಮಿತಿ ಸದಸ್ಯ ಸಿರಾಜುದ್ದೀನ್, ದಲಿತ ಮುಖಂಡ ರಾಕೇಶ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News