×
Ad

ಅಕ್ರಮ ಜಾನುವಾರು ಸಾಗಾಟ: ಆರು ಮಂದಿ ಸೆರೆ

Update: 2018-02-23 22:32 IST

ಬ್ರಹ್ಮಾವರ, ಫೆ.23: ಎರಡು ವಾಹನಗಳಲ್ಲಿ ಕೇರಳಕ್ಕೆ ಅಕ್ರಮವಾಗಿ ಜಾನು ವಾರುಗಳನ್ನು ಸಾಗಾಟ ಮಾಡುತ್ತಿದ್ದ ಆರು ಮಂದಿಯನ್ನು ಬ್ರಹ್ಮಾವರ ಪೊಲೀಸರು ಫೆ.23ರಂದು  ಬ್ರಹ್ಮಾವರ ಆಕಾಶವಾಣಿ ಜಂಕ್ಷನ್ ಬಳಿ ಭರಣಿ ಪೆಟ್ರೋಲ್ ಬಂಕ್ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಂಧಿಸಿದ್ದಾರೆ.

ಬಸಪ್ಪ ಕನಗಾರ್, ಮಲ್ಲನ ಗೌಡ, ಆನಂದ, ಶ್ರೀಶೈಲಯ್ಯ ಹಿರೇಮಠ, ಆರೀಫ್, ಜಾಫರ್ ಸಾಧಿಕ್ ಬಂಧಿತ ಆರೋಪಿಗಳು. ಕುಂದಾಫುರ ಕಡೆ ಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಇಚರ್ ವಾಹನವನ್ನು ಪೊಲೀಸರು ಪರಿಶೀಲಿಸಿದಾಗ 9 ಎತ್ತು ಮತ್ತು 8 ಕೋಣ ಹಾಗೂ ಇನ್ನೊಂದು ವಾಹನ ಪರಿಶೀಲಿಸಿದಾಗ 17 ಕೋಣಗಳಿರುವುದು ಪತ್ತೆಯಾಗಿದೆ.

ಇವುಗಳನ್ನು ಆರೋಪಿಗಳು ಕಳವು ಮಾಡಿಕೊಂಡು ಮಾಂಸಕ್ಕಾಗಿ ಕೇರಳದ ಕಾಸರಗೋಡಿಗೆ ಸಾಗಾಟ ಮಾಡುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಎರಡು ವಾಹನಗಳು ಮತ್ತು 25 ಕೋಣ ಹಾಗೂ 9 ಎತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News