×
Ad

ಅಲ್ ಮದೀನ ಬೆಂಗಳೂರು: ಸ್ಪಿರಿಚುವಲ್ ಗೆಟ್ ಟುಗೆದರ್

Update: 2018-02-23 22:57 IST

ಬೆಂಗಳೂರು, ಫೆ. 23: ‘ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಬೆಂಗಳೂರು ಘಟಕದ ವತಿಯಿಂದ ಆಯೋಜಿಸಲ್ಪಟ್ಟ ಸ್ಪಿರಿಚುವಲ್ ಗೆಟ್ ಟುಗೆದರ್’ ಶಿವಾಜಿ ನಗರದ ಇಂಪೀರಿಯಲ್ ಆಡಿಟೋರಿಯಂನಲ್ಲಿ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಮುಸ್ಲಿಯಾರ್ ರವರ ನೇತೃತ್ವದಲ್ಲಿ ಇತ್ತೀಚೆಗೆ ಜರುಗಿತು.

ಅಲ್ ಮದೀನ ಬೆಂಗಳೂರು ಘಟಕದ ಅಧ್ಯಕ್ಷ ಮುಹಮ್ಮದ್ ತಸ್ಲೀಲ್ ಅಧ್ಯಕತೆ ವಹಿಸಿದರು. ಕಾರ್ಯಕ್ರಮವನ್ನು  ಆಹಾರ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಬದ್ರ್ ಮೌಲಿದ್, ಸ್ವಲಾತ್ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಯಿತು. ಸ್ವಾಗತ ಸಮಿತಿ ಚೆಯರ್ಮಾನ್ ಬಶೀರ್ ಸಅದಿ ಪೀಣ್ಯ ಸ್ವಾಗತಿಸಿದರು. ಅಲ್ ಮದೀನ ಮ್ಯಾನೇಜರ್ ಅಬ್ದುಲ್ ಖಾದಿರ್ ಸಖಾಫಿ ದಿಕ್ಸೂಚಿ ಭಾಷಣ ಮಾಡಿದರು. ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಸಂಸ್ಥೆಯ ಸೇವಾಚಟುವಟಿಕೆಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮುಹಮ್ಮದ್ ಕುಂಞಿ ಅಮ್ಜದಿ. ಅಬ್ದುರ್ರಝಾಕ್ ಮಾಸ್ಟರ್ , ಮುಹ್ಮದ್ ಅಲಿ ದಿಲೀಫ್, ತಾಜುದ್ದೀನ್ ಫಾಳಿಲಿ, ಇಬ್ರಾಹೀಂ ಸಖಾಫಿ ಪಯೋಟ, ಜಿ.ಎಂ.ಬಶೀರ್ ಮದನಿ (ಕೆಎಸ್‌ಒಸಿ ಆರ್)ಇಬ್ರಾಹೀಂ ಗೂನಡ್ಕ, ಹಂಝ ಮುಸ್ಲಿಯಾರ್ ಖತೀಬ್ ನೂರ್ ಮಸ್ಜಿದ್, ಕುದ್ರತುಲ್ಲಾ ಸಾಹೇಬ್, ಫಯಾರ್ ಅಹ್ಮದ್ ಸಾಹೇಬ್, ಜಅಫರ್ ನೂರಾನಿ, ಹಂಝ ಸಖಾಫಿ, ಮುಹಮ್ಮದ್ ಹನೀಫ್ ಇಂಜಿನಿಯರ್, ರವೂಫ್ ಇಂಜಿನಿಯರ್, ಶರೀಫ್ ಮಂಜೇರಿ, ಹಕೀಂ ಆರ್.ಟಿ. ನಗರ, ಜಲೀಲ್ ಜಾಲಹಳ್ಳಿ, ಶಿಹಾಬ್ ಮಡಿವಾಳ, ಅಬ್ದುರ್ರಹ್ಮಾನ್ ಹಾಜಿ, ರಫೀಖ್ ರಾಯಲ್, ಹಂಝ ರಾಯಲ್, ಮುನೀರ್ ರಾಮೂರ್ತಿ ನಗರ, ನಾಸಿರ್ ಬಜ್ಪೆ, ಹಮೀದ್ ಬಜ್ಪೆ, ಶುಕೂರ್ ಹಾಜಿ, ಸ್ವಾಲಿಹ್ ಶಿವಾಜಿ ನಗರ, ಶಬೀಬ್ ಅಲಸೂರು ಹಾಗೂ ಎಸ್‌ಜೆಯು, ಎಸ್‌ಎಂಎ, ಎಸ್‌ವೈಎಸ್, ಎಸ್ಸೆಸ್ಸೆಫ್ ಮುಂತಾದ ಸಂಘಟನೆಗಳ ನಾಯಕರು, ಕಾರ್ಯಕರ್ತರು, ಹಿತೈಶಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಲ್ ಮದೀನ ಡಾಕ್ಯುಮೆಂಟರಿಯನ್ನು ಪ್ರದರ್ಶಿಸಲಾಯಿತು. ಮಾರ್ಕಿನ್ಸ್ ದಅವಾ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ನಡೆಯಿತು. ಅಲ್ ಮದೀನ ಬೆಂಗಳೂರು ಸಮಿತಿ ಆರ್ಗನೈಝರ್ ಅಬ್ದುಲ್ ಗಫೂರ್ ಸಖಾಫಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News