×
Ad

ಭಟ್ಕಳದ ಮಾನವತಾವಾದಿ ಮಾಧವ ಭಟ್ ನಿಧನ

Update: 2018-02-23 23:48 IST

ಮಂಗಳೂರು, ಫೆ. 23: ಹೊಟೇಲ್ ಶ್ರೀನಿವಾಸ ಡಿಲಕ್ಸ್ ಮಾಲಕ, ಸಮಾಜ ಸೇವಕ ಮಾಧವ ಭಟ್ (61)  ಮಂಗಳವಾರ  ನಿಧನರಾದರು.

ಭಟ್ ಹಲವು ವರ್ಷಗಳಿಂದ ಗಂಟಲ ಸೋಂಕಿನಿಂದ ಬಳಲುತ್ತಿದ್ದರು. ಅದು ಇತ್ತೀಚಿನ ವರ್ಷಗಳಲ್ಲಿ ವಿಪರೀತವಾಗಿತ್ತು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಸೋಮವಾರ ಭಟ್ ಆರೋಗ್ಯದಲ್ಲಿ ತೀವ್ರ ಏರುಪೇರಾದ ಕಾರಣ ಅವರನ್ನು ಮಂಗಳೂರಿನ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಂಗಳವಾರ  ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಶಾಲಾ ಬಡ ವಿದ್ಯಾರ್ಥಿಗಳಿಗೆ ಕೇವಲ ಐದು ರೂ.ಗೆ ಊಟ ನೀಡುವ ಮೂಲಕ ಮಾಧವ ಭಟ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದರು.

ಭಟ್ ಅವರು ಕಳೆದ 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು. ಸರಕಾರ ಮಧ್ಯಾಹ್ನದ ಬಿಸಿಯೂಟ ಆರಂಭಿಸುವುದಕ್ಕೂ ಮುನ್ನ ಅವರು ಬಡ ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಗೆ ಊಟ ನೀಡುತ್ತಿದ್ದರು. ಅವರ ಹೋಟೆಲ್‌ಗೆ ಪ್ರತಿನಿತ್ಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಆಗಮಿಸಿ ಊಟ ಸೇವಿಸುತ್ತಿದ್ದರು. ಸರಕಾರವು ಬಿಸಿಯೂಟ ಆರಂಭಿಸಿದ ನಂತರ ಈ ಸಂಖ್ಯೆ ಇನ್ನೂರಕ್ಕೆ ತಲುಪಿತ್ತು. ಆಹಾರ ಪದಾರ್ಥಗಳ ಹೆಚ್ಚುತ್ತಿರುವ ದರದಿಂದಾಗಿ ಭಟ್ ಊಟದ ಬೆಲೆಯನ್ನೂ ಹತ್ತು ರೂ.ಗೆ ಏರಿಸಿದ್ದರು. ಅವರ ಹೋಟೆಲ್‌ನಲ್ಲಿ ಕಡಿಮೆ ಬೆಲೆಗೆ ಊಟ ಸೇವಿಸಿ ಅನೇಕ ವಿದ್ಯಾರ್ಥಿಗಳು ವಿದೇಶಗಳಲ್ಲಿ ಉದ್ಯೋಗದಲ್ಲಿದ್ದರೂ ಊರಿಗೆ ಬಂದ ಸಂದರ್ಭದಲ್ಲಿ ಮಾಧವ ಭಟ್‌ರನ್ನು ಭೇಟಿಯಾಗುತ್ತಿದ್ದರು ಎಂದು ಅವರ ಪರಿಚಯಸ್ಥರು ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News