×
Ad

ಲೋಬೊ, ಬಾವ ಅವ್ಯವಹಾರದಲ್ಲಿ ಭಾಗಿ ಶಂಕೆ: ಎಡಿಬಿ ಪ್ರತಿನಿಧಿಗಳಿಗೆ ಸಿಪಿಎಂ ದೂರು

Update: 2018-02-24 19:10 IST

ಮಂಗಳೂರು, ಫೆ. 24: ಎಡಿಬಿ ಎರಡನೇ ಹಂತದ ಸಾಲ ಮಂಜೂರಾತಿ, ಕೈಗೊಳ್ಳುವ ಕಾಮಗಾರಿಗಳ ಕುರಿತು ಚರ್ಚಿಸಲು ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ನ ವಿದೇಶಿ ಪ್ರತಿನಿಧಿಗಳ ತಂಡ ಇಂದು ಮಂಗಳೂರಿಗೆ ಭೇಟಿ ನೀಡಿ, ಜಿಲ್ಲಾಧಿಕಾರಿ, ಪಾಲಿಕೆ ಕಮಿಷನರ್, ಮೇಯರ್ ರನ್ನು ಭೇಟಿ ಮಾಡಿ ವಿವರ ಪಡೆದುಕೊಂಡರು. 

ಈ ಸಂದರ್ಭ ಸಿಪಿಐಎಂ ಮಂಗಳೂರು ನಗರ ಸಮಿತಿಯ ನಿಯೋಗ ಎಡಿಬಿ ಪ್ರತಿನಿಧಿಗಳನ್ನು ಭೇಟಿಯಾಗಿ ಪ್ರಥಮ ಹಂತದ 360 ಕೋಟಿ ರೂ. ಸಾಲ ಯೋಜನೆಯಲ್ಲಿ ರೂಪಿಸಿದ ಕುಡ್ಸೆಂಪ್ ಕಾಮಗಾರಿಯಲ್ಲಿ ನಡೆದ ಭ್ರಷ್ಟಾಚಾರ, ಕಳಪೆ ಕಾಮಗಾರಿಗಳ ಬಗ್ಗೆ ಹಾಗೂ ಎರಡನೇ ಹಂತದ ಸಾಲದಲ್ಲಿ ನಡೆಯಲಿರುವ ಪಂಪಿಂಗ್ ಮೇನ್ ಬದಲಾವಣೆ ಯೋಜನೆಯ ಟೆಂಡರ್ ಹಂತದಲ್ಲಿ ನಡೆದಿರುವ ಅವ್ಯವಹಾರದ ಕುರಿತು ಮನವಿ ಸಲ್ಲಿಸಿ, ಗಮನ ಸೆಳೆಯಿತು.

ಪ್ರಥಮ ಹಂತದ ಯೋಜನೆಯ ವೈಫಲ್ಯಕ್ಕೆ ಕಾರಣರಾದ ಭ್ರಷ್ಟ ಕನ್ಸಲ್ಟನ್ಸಿ, ಗುತ್ತಿಗೆದಾರರು ಎರಡನೇ ಹಂತದ ಯೋಜನೆಯ ಒಳಗಡೆ ನುಸುಳಿರುವ ಕುರಿತು ಹಾಗು ಶಾಸಕರಾದ ಜೆ.ಆರ್. ಲೋಬೊ ಮತ್ತು ಮೊಯ್ದಿನ್ ಬಾವ ಅವರು ಅವ್ಯವಹಾರದಲ್ಲಿ ಭಾಗಿಯಾಗಿರುವ ಸಂಶಯ ಇದೆ ಎಂದು ಸಿಪಿಐಎಂ ನಿಯೋಗ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ನಿಯೋಗದಲ್ಲಿ‌ ಸಿಪಿಎಂ ಮುಖಂಡರಾದ ಸುನೀಲ್ ಕುಮಾರ್ ಬಜಾಲ್,  ಬಿ ಎಂ ಮಾಧವ, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News