×
Ad

ಇನ್ನು ಮುಂದೆ ನಗರಗಳಲ್ಲಿ ಭೂಪರಿವರ್ತನೆ ಸುಲಭ: ಶಾಸಕ ಲೋಬೊ

Update: 2018-02-24 19:42 IST

ಮಂಗಳೂರು, ಫೆ.24: ಸುದೀರ್ಘ ಪ್ರಕ್ರಿಯೆಗಳಿಲ್ಲದೆ ನಾಗರಿಕರಿಗೆ ಜಾಗದ ಕನ್ವರ್ಶನ್ (ಭೂ ಪರಿವರ್ತನೆ) ಸರ್ಟಿಫಿಕೆಟ್ ಸಿಗುವಂತೆ ಮಾಡಲು ಭೂ ಸುಧಾರಣಾ ಕಾಯ್ದೆ 1995 ‘ಎ’ಗೆ ತಿದ್ದುಪಡಿ ತರಲಾಗಿದೆ ಎಂದು ಶಾಸಕ ಜೆ.ಆರ್. ಲೋಬೊ ತಿಳಿಸಿದ್ದಾರೆ.

ಈ ಹಿಂದೆ ಜಾಗದ ಕನ್ವರ್ಶನ್ ಮಾಡಬೇಕಾದರೆ ಸೂಕ್ತ ದಾಖಲೆಗಳನ್ನು ಕಂದಾಯ ಇಲಾಖೆಗೆ ಸಲ್ಲಿಸಿ ನಂತರ ಅಲ್ಲಿ ವಿವಿಧ ಪ್ರಕ್ರಿಯೆಗಳು ನಡೆದ ಬಳಿಕ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೋಗಿ ಅಲ್ಲಿಯೂ ಹಲವು ಪ್ರಕ್ರಿಯೆಗಳು ನಡೆಯಬೇಕಿತ್ತು. ನಾಲ್ಕು ತಿಂಗಳಲ್ಲಿ ಕನ್ವರ್ಶನ್ ಸರ್ಟಿಫಿಕೆಟ್ ನೀಡಬೇಕು ಎಂದು ನಿಯಮಗಳಲ್ಲಿ ಹೇಳಿದ್ದರೂ ಅದಕ್ಕೆ ಪೂರ್ವಭಾವಿಯಾಗಿ ನಡೆಸಬೇಕಾದ ಪ್ರಕ್ರಿಯೆಗಳೇ ಹೆಚ್ಚಾಗಿದ್ದರಿಂದ ತಿಂಗಳಾನುಗಟ್ಟಲೆ ಹಿಡಿಯುತ್ತಿತ್ತು. ಈ ಸಮಸ್ಯೆಯನ್ನು ಮನಗಂಡು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಜೆ.ಆರ್. ಲೋಬೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಿದ್ದುಪಡಿ ಜಾರಿಯಾದ ಬಳಿಕ ಕನ್ವರ್ಶನ್‌ಗೆ ಈ ಹಿಂದಿನ ಪ್ರಕ್ರಿಯೆಗಳನ್ನು ಮಾಡಬೇಕಾಗಿಲ್ಲ. ಯಾವ ಉದ್ದೇಶಕ್ಕಾಗಿ  ಕನ್ವರ್ಶನ್ ಬಯಸಲಾಗುತ್ತಿದೆ (ವಸತಿ, ವಾಣಿಜ್ಯ) ಎಂಬುದನ್ನು ನಮೂದಿಸಿ ನೇರವಾಗಿ ಏಕವಿನ್ಯಾಸಕ್ಕೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದರೆ ಸಾಕು. ಭೂಪರಿವರ್ತನೆಯ ನಿಗದಿತ  ಶುಲ್ಕವನ್ನು ಅರ್ಜಿದಾರರು ಪಾವತಿಸಿ ಶೀಘ್ರವಾಗಿ ಸರ್ಟಿಫಿಕೆಟ್ ಪಡೆದುಕೊಳ್ಳಬಹುದು. ಇದು ಕೇವಲ ಮಂಗಳೂರಿಗೆ ಮಾತ್ರ ಅನ್ವಯಿಸುವುದಿಲ್ಲ. ರಾಜ್ಯದ ಎಲ್ಲೆಲ್ಲಿ ನಗರಾಭಿವೃದ್ಧಿ ಯೋಜನೆ ಇದೆಯೋ ಎಲ್ಲ ಕಡೆ ಅನ್ವಯಿಸುತ್ತದೆ ಎಂದು ಜೆ.ಆರ್. ಲೋಬೊ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News