×
Ad

ಬಯಲು ರಂಗಮಂದಿರಕ್ಕೆ ಕವಿ ಮುದ್ದಣ ಹೆಸರಿಡಲು ಮನವಿ

Update: 2018-02-24 21:26 IST

ಉಡುಪಿ, ಫೆ.24: ಉಡುಪಿ ನಗರಸಭೆಯಿಂದ ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ನಿರ್ಮಿಸಿರುವ ಬಯಲು ರಂಗಮಂದಿರಕ್ಕೆ ಉಡುಪಿಯ ಹೆಸ ರಾಂತ ಕವಿ ಮುದ್ದಣರ ಹೆಸರಿಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಫೆ.23ರಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಮನವಿ ಸಲ್ಲಿಸಿತು.

ಕವಿ ಮುದ್ದಣ ಶುಭನಾಮದಿಂದ ಪ್ರಖ್ಯಾತರಾದ ನಂದಳಿಕೆಯ ಲಕ್ಷ್ಮೀ ನಾರಾಯಣಯ್ಯ ಶ್ರೀರಾಮಶ್ವಮೇಧಂ ಮತ್ತು ಅಧ್ಭುತ ರಾಮಾಯಣ ಎಂಬ ಎರಡು ಗದ್ಯಕಾವ್ಯಗಳ ಮೂಲಕ ಎಳವೆಯಲ್ಲಿ ಸಾಧನೆ ಮಾಡಿದವರು. ಕವಿ ಸಾಹಿತಿ, ಯಕ್ಷಗಾನ ಪ್ರಸಂಗಕರ್ತ, ದೈಹಿಕ ಶಿಕ್ಷಕರಾಗಿ, ಕನ್ನಡ ಪಂಡಿತರಾಗಿ ತನ್ನ ಜೀವತದ 31 ವರ್ಷದಲ್ಲಿ ಕನ್ನಡ ನಾಡು ನುಡಿಗೆ ಸೇವೆಯನ್ನು ಸಲ್ಲಿಸಿರು ಎಂದು ಮನವಿಯಲ್ಲಿ ತಿಳಿಸಲಾಗಿದೆ

ಈ ಸಂದರ್ಭ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ ಶಿರೂರು, ವಿನಯಚಂದ್ರ ಸಾಸ್ತಾನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News