×
Ad

ಆಳ್ವಾಸ್ ಫಿಝಿಯೋಕನೆಕ್ಟ್-ರಾಷ್ಟ್ರೀಯ ಸಮ್ಮೇಳನ

Update: 2018-02-24 22:43 IST

ಮೂಡುಬಿದಿರೆ, ಫೆ.24: ಎಲ್ಲಾ ವಿಷಯ ತಿಳಿದುಕೊಂಡಿದ್ದು ಒಂದು ವಿಷಯದಲ್ಲಿ ವಿಶೇಷ ಆಸಕ್ತಿಯನ್ನ ಬೆಳೆಸಿಕೊಳ್ಳ ಬೇಕು. ನಿರಂತರ ಅಭ್ಯಾಸ ಹಾಗೂ ಪರಿಶ್ರಮ ಒಂದಿದ್ದರೆ ಮುಂದೊಂದು ದಿನ ಉತ್ತಮ ವೈದ್ಯರಾಗುತ್ತೀರಿ ಎಂದು ಖ್ಯಾತ ವೈದ್ಯ ಡಾ. ಗಣೇಶ್.ಎಸ್.ಪೈ ತಿಳಿಸಿದರು.

ಆಳ್ವಾಸ್ ಫಿಝಿಯೋತೆರಫಿ ಮತ್ತು ಸಂಶೋಧನ ವಿಭಾಗದ ವತಿಯಿಂದ ಶನಿವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ‘ಫಿಝಿಯೋಕನೆಕ್ಟ್’ ಎಂಬ ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಸಂಶೋಧನೆಯ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸುತ್ತಿಲ್ಲ, ತರಗತಿಯ ಅಭ್ಯಾಸದ ಜೊತೆಗೆ ಹೆಚ್ಚಿನ ಗಮನವನ್ನ ಸಂಶೋಧನೆಯಲ್ಲಿ ವಹಿಸುವುದು ಉತ್ತಮ. ಸಮಾಜದಲ್ಲಿ ಜನರಿಗೆ ವೈದ್ಯರ ಹೆಚ್ಚಿನ ಅವಶ್ಯಕತೆವಿದ್ದು, ವೈದ್ಯರು ತಮ್ಮ ಕಾರ್ಯಶ್ರೇಷ್ಠತೆಯಿಂದ ಸಾಮರ್ಥ್ಯವನ್ನ ಮೆರೆಯಬೇಕು ಎಂದು ಟ್ರಸ್ಟೀ ವಿವೇಕ್ ಆಳ್ವ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ’ಫಿಝಿಯೋಕನೆಕ್ಟ್’ ಎಂಬ ಮ್ಯಾಗಝಿನ್ ಅನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಡಾ.ಜೋಸೆಫ್ ಸ್ವಾಗತಿಸಿ, ಡಾ.ವಾಟ್ಸನ್ ವಂದಿಸಿದರು. ಕೇರಳದ ಫಿಝಿಯೋತೆರಪಿಸ್ಟ್ ಡಾ.ನಿಜಿತ್ ಗೋವಿಂದನ್, ಡಾ.ದೀಪಕ್ ಪಿಂಟೋ, ಡಾ.ಹರೀಶ್ ನಾಯಕ್, ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವಾ ಹಾಗೂ ವಿನಯ್ ಆಳ್ವ ಉಪಸ್ಥಿತರಿದ್ದರು. ಡಾ.ರಮ್ಯ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News