ಗ್ರೀನ್ ವ್ಯಾಲಿ ನ್ಯಾಶನಲ್ ಸ್ಕೂಲ್, ಪಿಯು ಕಾಲೇಜಿನಲ್ಲಿ ಹಸಿರೋತ್ಸವ-2018 ಆಚರಣೆ

Update: 2018-02-24 18:26 GMT

ಮಂಗಳೂರು, ಫೆ.24: ಗ್ರೀನ್ ವ್ಯಾಲಿ ನ್ಯಾಶನಲ್ ಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಶನಿವಾರ ಹಸಿರೋತ್ಸವ-2018ನ್ನು ಆಚರಿಸಲಾಯಿತು. ಇಂದಿನ ಯುವಪೀಳೀಗೆ ಎದುರಿಸುತ್ತಿರುವ ಪಾರಿಸಾರಿಕ ಅಪಾಯಗಳು ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬ್ರಿಟಿಷ್ ಮಂಡಳಿಯ ಅಂತಾರಾಷ್ಟ್ರೀಯ ಶಾಲಾ ಪ್ರಶಸ್ತಿ ಕ್ರಿಯಾ ಯೋಜನೆಯ ಅಂಗವಾಗಿ ಶಾಲೆಯು ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಆಯೋಜಿಸಿತ್ತು. ಇಂದು ನಡೆದ ಹಸಿರೋತ್ಸವವು ಈ ಎಲ್ಲಾ ಕಾರ್ಯಕ್ರಮಗಳ ಸಮಾರೋಪ ಸಮಾರಂಭವಾಗಿತ್ತು.

ಪ್ರಕೃತಿಗಾಗಿ ಶಕ್ತಿಗಳ ಒಟ್ಟುಗೂಡುವಿಕೆ ಎಂಬ ಘೋಷವಾಕ್ಯದಲ್ಲಿ ನಡೆದ ಹಬ್ಬದಲ್ಲಿ 8,9 ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು. ಈ ಮೂಲ ಘೊಷವಾಕ್ಯದೊಂದಿಗೆ, ಹಸಿರು ಯೋಚಿಸಿ, ಹಸಿರು ವರ್ತಿಸಿ, ಹಸಿರು ತಿನ್ನಿ, ಹಸಿರು ಖರೀದಿಸಿ, ಹಸಿರಾಗಿರಿ ಮುಂತಾದ ಘೋಷಣೆಗಳನ್ನೂ ಮೊಳಗಿಸಲಾಯಿತು.

ವರ್ಷಪೂರ್ತಿ ನಮ್ಮ ಪರಿಸರ ಸೈನಿಕರು, ಈ ಭೂಮಿಯನ್ನು ನಮಗೆ ಮತ್ತು ನಮ್ಮ ಭವಿಷ್ಯದ ತಲೆಮಾರುಗಳಿಗೆ ಸುರಕ್ಷಿತ ತಾಣವನ್ನಾಗಿ ಮಾಡಲು ಸಾಧ್ಯವಿರುವ ಎಲ್ಲ ಚಟುವಟಿಕೆಗಳನ್ನೂ ಕೈಗೆತ್ತಿಕೊಂಡಿದ್ದಾರೆ. ಆರೋಗ್ಯಕರ ಭೋಜನ ಸೇವನೆ, ಸ್ವಚ್ಛತಾ ಅಭಿಯಾನಗಳು, ಶಾಲಾ ಆವರಣಗಳಲ್ಲಿ ಗಿಡಗಳ ನೆಡುವಿಕೆ, ಘೋಷವಾಕ್ಯಕ್ಕೆ ತಕ್ಕುದಾದ ಭಿತ್ತಿಚಿತ್ರ ಮತ್ತು ಚಿತ್ರಕಲೆ ಸ್ಪರ್ಧೆ ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಯಿತು.

ವಿದ್ಯಾರ್ಥಿಗಳ ಜೊತೆ ಅವರ ಪೋಷಕರು ಕೂಡಾ ಈ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಕಾಣಿಕೆ ನೀಡಿದರು. ಚರ್ಚೆಗಳು, ಪ್ರಬಂಧ, ಭಾಷಣ ಮತ್ತು ಪರಿಸರಕ್ಕೆ ಸಂಬಂಧಪಟ್ಟ ರಸಪ್ರಶ್ನೆ ಸ್ಪರ್ಧೆಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News