ಖಾಲೀದಾ ಝಿಯಾಗೆ ಜಾಮೀನು ವಿಸ್ತರಣೆ

Update: 2018-02-25 16:54 GMT

ಢಾಕಾ,ಫೆ.25: ಭ್ರಷ್ಟಾಚಾರ ಹಗರಣವೊಂದರಲ್ಲಿ ಆರೋಪಿಯಾಗಿರುವ ಬಾಂಗ್ಲಾ ನ್ಯಾಶನಲ್ ಪಾರ್ಟಿ ಪಕ್ಷದ ಅಧ್ಯಕ್ಷೆ ಹಾಗೂ ಮಾಜಿ ಪ್ರಧಾನಿ ಖಾಲೀದಾ ಝಿಯಾ ಅವರಿಗೆ ನೀಡಲಾಗಿದ್ದ ಜಾಮೀನನ್ನು ಸ್ಥಳೀಯ ನ್ಯಾಯಾಲಯವು ಸೋಮವಾರದವರೆಗೆ ವಿಸ್ತರಿಸಿದೆ.

ತನ್ನ ದಿವಂಗತ ಪತಿ ಝಿಯಾ ಅವರ ಹೆಸರಿನಲ್ಲಿ ಆರಂಭಿಸಲಾಗಿದ್ದ ಝಿಯಾ ಅನಾಥಾಶ್ರಮ ಟ್ರಸ್ಟ್‌ಗಾಗಿ ವಿದೇಶದಿಂದ ಹರಿದುಬಂದಿದ್ದ 2.50 ಲಕ್ಷ ಡಾಲರ್ ಮೌಲ್ಯದ ದೇಣಿಗೆಯನ್ನು ದುರ್ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಢಾಕಾದ ವಿಶೇಷ ನ್ಯಾಯಾಲಯ 72 ವರ್ಷದ ಖಾಲೀದಾ ಅವರನ್ನು ದೋಷಿಯೆಂದು ಘೋಷಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಖಾಲೀದಾರ ಜಾಮೀನು ಅವಧಿಯನ್ನು ವಿಸ್ತರಿಸುವಂತೆ ಕೋರಿ ಅವರ ವಕೀಲರು ನ್ಯಾಯಾಲಯದ ಮೆಟ್ಟಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News