×
Ad

ಅವೈಜ್ಞಾನಿಕ ಮೀನುಗಾರಿಕೆಯಿಂದ ಆಮೆ, ಪಕ್ಷಿಗಳ ಜೀವಕ್ಕೆ ಕುತ್ತು: ಸಮೀಕ್ಷೆಯಿಂದ ಬಹಿರಂಗ

Update: 2018-02-26 13:56 IST
ಗಾಯಗೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕಡಲಾಮೆ 
 

ಕಾಸರಗೋಡು, ಫೆ.26: ಅವೈಜ್ಞಾನಿಕ ಮೀನುಗಾರಿಕೆಯು ಮಾಲಿನ್ಯ ಆಮೆ ಮತ್ತು ಪಕ್ಷಿಗಳ ವಿನಾಶಕ್ಕೆ ಕಾರಣವಾಗುತ್ತಿದೆ ಎಂದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯೀಕರಣ ವಿಭಾಗ ನಡೆಸಿದ ಸಮುದ್ರ ಸಮೀಕ್ಷೆಯಲ್ಲಿ ಇಂತಹ ಅಂಶವನ್ನು ಬಯಲಾಗಿದೆ. ಸಮುದ್ರದಲ್ಲಿ ಮಾಲಿನ್ಯ, ಥರ್ಮೋಕೋಲ್, ಪ್ಲಾಸ್ಟಿಕ್ ಬಾಟಲ್ ಗಳನ್ನು ಭಾರೀ ಪ್ರಮಾಣದಲ್ಲಿ ಪತ್ತೆಹಚ್ಚಲಾಗಿದೆ. ಸಮುದ್ರದಲ್ಲಿ ಎಸೆಯಲಾಗುವ ಹಾನಿಗೊಂಡ ಬಲೆಗಳಿಗೆ ಸಿಲುಕಿ ಆಮೆ, ಪಕ್ಷಿಗಳ ಜೀವಕ್ಕೆ ಕುತ್ತಾಗುತ್ತಿದೆ. ಇದು ಗಂಭೀರ ಸಮಸ್ಯೆ ಎಂದು ಸಮೀಕ್ಷೆ ಹೇಳುತ್ತಿದೆ. 

ಅಭಿಲಾಷ್ ರವೀಂದ್ರನ್, ವಿಜೇಶ್ ಪಳ್ಳಿ ಕುನ್ನು, ಸಂದೀಪ್ ದಾಸ್, ಮ್ಯಾಕ್ಸಿಮ್ ರೊಡ್ರಿಗಸ್, ಮನೋಜ್ ಇರಿಟ್ಟಿ, ಪಿ.ಸುಧೀರ್ ಕುಮಾರ್, ಅರಣ್ಯ ಇಲಾಖಾ ಅಧಿಕಾರಿ ಪಿ.ಬಿಜು, ಎಂ.ಜೇಶಿಲ್, ಕೆ.ಇ.ಬಿಜು ಮೋನ್, ರಾಜೇಶ್ ಪಟ್ಟೇರಿ, ಶೈನಿ ಕುಮಾರ್ ಮೊದಲಾದವರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ಹೊಸ ಪಕ್ಷಿ ಸಂಚಾರವನ್ನು ತಂಡಕ್ಕೆ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಸಣ್ಣ ಗಾತ್ರದ ಕೊಕ್ಕರೆ ಹಕ್ಕಿ(ಆರ್ಟಿಕ್ ಸ್ಕೇವ್) ಗುಂಪು ಮಾತ್ರ ಪತ್ತೆಹಚ್ಚಲು ಸಾಧ್ಯವಾಗಿದೆ.
ಫೇಮರಿನ್ ಸ್ಕೇವ್ ಹೂಗ್ಲಿನ್ ಕಡಲು ಕೊಕ್ಕರೆ ಸೇರಿದಂತೆ ಹತ್ತಕ್ಕೂ ಅಧಿಕ ಕೊಕ್ಕರೆಯನ್ನು ತಂಡವು ನಿರೀಕ್ಷಣೆ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News