ಮಂಗಳೂರು ವಿಶ್ವವಿದ್ಯಾನಿಲಯದ 36ನೆ ವಾರ್ಷಿಕ ಘಟಿಕೋತ್ಸವ

Update: 2018-02-26 17:44 GMT

ಮಂಗಳೂರು, ಫೆ.26: ಶಿಕ್ಷಣ, ತಂತ್ರಜ್ಞಾನ ವೈಯಕ್ತಿಕ ಮತ್ತು ಸಮಾಜದ ಅಭಿವೃದ್ದಿಯೊಂದಿಗೆ ದೇಶದ ಪ್ರಗತಿಗೆ ಬಳಕೆಯಾಗಲಿ ಎಂದು ಸಿಂಗಾಪುರ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾನಿಲಯದ ಅಧ್ಯಕ್ಷ ಪದ್ಮಶ್ರೀ  ಪ್ರೊ.ಸುಬ್ರ ಸುರೇಶ್ ಎಂದು ಹೇಳಿದ್ದಾರೆ.

ವಿವಿ ಆವರಣದಲ್ಲಿರುವ ಮಂಗಳ ಸಭಾಂಗಣದಲ್ಲಿ ಇಂದು ಬೆಳಗ್ಗೆ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯದ 36ನೆ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

ದೇಶದಲ್ಲಿ ನಾಲ್ಕನೆ ಕೃಗಾರಿಕಾ ಕ್ರಾಂತಿ 4.0 ಜಾರಿಯಾಗುತ್ತಿರುವ ಸಂದರ್ಬದಲ್ಲಿ ತಂತ್ರಜ್ಞಾನ ಮತ್ತು ಮಾನವೀಯತೆಯ ನಡುವೆ ಸಮತೋಲನದ ಅಭಿವೃದ್ಧಿ ಸಾಧಿಸಬೇಕಾಗಿದೆ. ಈ ಹಿಂದಿನ ಮೂರು ಕೈಗಾರಿಕಾ ಕ್ರಾಂತಿ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಸಿದೆ. ಜೊತೆಗೆ ಸಾಕಷ್ಟು ಜನರ ವೃತ್ತಿಯನ್ನು ಕಿತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ನಕಾರಾತ್ಮಕ ರೀತಿಯ ಬೆಳವಣಿಗೆ ಆಗದಂತೆ ಎಚ್ಚರ ವಹಿಸಬೇಕು ಎಂದು ಅವರು ತಿಳಿಸಿದರು

ಮಂಗಳೂರು ವಿವಿ ಕುಲಪತಿ ಡಾ.ಕೆ.ಭೈರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

 ಸಮಾರಂಭದಲ್ಲಿ ಡಾ.ಸುಬ್ರ ಸುರೇಶ್ ಅವರಿಗೆ ಗೌರವ ಡಾಕ್ಟರೇಟ್, ಮಂಗಳೂರು ವಿಶ್ವವಿದ್ಯಾನಿಲಯದಿಂದ 97 ಮಂದಿಗೆ ಡಾಕ್ಟರೇಟ್ ಪದವಿ (ಕಲೆ-17, ವಿಜ್ಞಾನ 74, ವಾಣಿಜ್ಯ-04, ಶಿಕ್ಷಣ-02), 45 ಮಂದಿಗೆ ಚಿನ್ನದ ಪದಕ ಮತ್ತು 75 ಮಂದಿಗೆ ನಗದು ಬಹುಮಾನ, ವಿವಿಧ ಕೋರ್ಸುಗಳ 242 ರ್ಯಾಂಕ್‌ಗಳಲ್ಲಿ ಪ್ರಥಮ ರಾಂಕ್ ಪಡೆದ 65 ಮಂದಿಗೆ ರ್ಯಾಂಕ್ ಪ್ರಮಾಣ ಪತ್ರ (ಸ್ನಾತಕೋತ್ತರ ಪದವಿ-48 ಮತ್ತು ಪದವಿ-17: ಕಲೆ-17, ವಿಜ್ಞಾನ ಮತ್ತು ತಂತ್ರಜ್ಞಾನ-33, ವಾಣಿಜ್ಯ-10, ಶಿಕ್ಷಣ-02, ಸ್ನಾತಕೋತ್ತರ ಡಿಪ್ಲೊಮಾ-03) ಪ್ರದಾನ ಮಾಡಲಾಯಿತು.

ಕುಲಸಚಿವ ಎ.ಎಂ.ಖಾನ್ ಹಾಗೂ ವಿವಿಧ ವಿಭಾಗ ದ ಮುಖ್ಯಸ್ಥರು, ಅಕಾಡಮಿಕ್ ಕೌನ್ಸಿಲ್ ಹಾಗೂ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು. ಕುಲಸಚಿವ ನಾಗೇಂದ್ರ ಪ್ರಕಾಶ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News