×
Ad

ಮೊಗವೀರರು ಇತರರಿಗೆ ಮಾದರಿ: ಶ್ರೀರೂರು ಸ್ವಾಮೀಜಿ

Update: 2018-02-26 14:31 IST

ಪಡುಬಿದ್ರೆ, ಫೆ.26: ಕರಾವಳಿ ಭಾಗದಲ್ಲಿ ಶ್ರಮದ ಜತೆಗೆ ಮೊಗವೀರರು ಸಂಘಟಿತರಾಗಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥರು ಹೇಳಿದರು.

ಹೆಜಮಾಡಿ ಸಣ್ಣಗುಂಡಿ ಮೊಗವೀರ ಸಭಾ ಆಡಳಿತದ ಗೀತಾ ಮಂದಿರದ ನೂತನ ಕಟ್ಟಡಕ್ಕೆ ರವಿವಾರ ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸನ್ಮಾನ: ಇದೇ ಸಂದರ್ಭ ಕಟ್ಟಡ ನಿರ್ಮಾಣದ ಗುತ್ತಿಗೆದಾರ ಕಾಪು ಆರ್ಯನ್ ಕನ್‌ಸ್ಟ್ರಕ್ಷನ್‌ನ ಯೋಗೀಶ್ ಕಾಪು ಅವರನ್ನು ಸಣ್ಣಗುಂಡಿ ಮೊಗವೀರ ಸಭಾ ಮತ್ತು ಗೀತಾಮಂದಿರ ಜೀರ್ಣೋದ್ಧಾರ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ವೇದಮೂರ್ತಿ ರಂಗಣ್ಣ ಭಟ್ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿಗಳ ಮೂಲಕ ಸ್ವಾಮೀಜಿ ಗೀತಾಮಂದಿರ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು. ಸಣ್ಣಗುಂಡಿ ಮೊಗವೀರ ಸಭಾ ಗುರಿಕಾರ ಗಂಗಾಧರ ಕೆ.ಕಾಂಚನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ಮನೋಹರ ಎಸ್. ಶೆಟ್ಟಿ, ಹೆಜಮಾಡಿ ಕೋಡಿ ಬಿಲ್ಲವರ ಶ್ರೀ ವಿಠೋಭ ಭಜನಾ ಮಂದಿರದ ಉಪಾಧ್ಯಕ್ಷ ವೇಣುಗೋಪಾಲ್, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ತಾಲೂಕು ಪಂಚಾಯತ್ ಸದಸ್ಯೆ ರೇಣುಕಾ ಪುತ್ರನ್, ದೋಗ್ರ ಪಟ್ಟೆಬಲೆ ಫಂಡ್‌ನ ಗಣೇಶ್ ಕೋಟ್ಯಾನ್, ಹೆಜಮಾಡಿ ಏಳೂರು ಮೊಗವೀರ ಸಭಾ ಅಧ್ಯಕ್ಷ ವಿಜಯ ಕೋಟ್ಯಾನ್, ಮುಲ್ಕಿ ನಾಲ್ಕುಪಟ್ಣ ಮೊಗವೀರ ಸಭಾದ ಅಧ್ಯಕ್ಷ ಗುರುವಪ್ಪ ಕೋಟ್ಯಾನ್, ಸಣ್ಣಗುಂಡಿ ಮೊಗವೀರ ಸಭಾ ಅಧ್ಯಕ್ಷ ವಿಠಲ ಜಿ.ಪುತ್ರನ್, ಮಹಿಳಾ ಸಭಾ ಅಧ್ಯಕ್ಷೆ ಜಯಶ್ರೀ ಕಾಂಚನ್, ಗೀತಾಮಂದಿರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹೇಮಾನಂದ ಕೆ.ಪುತ್ರನ್ ಮುಖ್ಯ ಅತಿಥಿಗಳಾಗಿದ್ದರು.

ಅರ್ಚಕ ವೇದಮೂರ್ತಿ ಹರಿದಾಸ ಭಟ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಗಾಯತ್ರಿ ಏಕನಾಥ ಕರ್ಕೇರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News