ಮಂಗಳೂರು: ವಿದ್ಯಾ ಸಂಸ್ಥೆ ವತಿಯಿಂದ 'ಸ್ನೇಹ ಸಮ್ಮಿಲನ' ಕಾರ್ಯಕ್ರಮ
ಮಂಗಳೂರು,ಫೆ.26: ನಗರದ ವಿದ್ಯಾ ಶಿಕ್ಷಣ ಸಂಸ್ಥೆಯಲ್ಲಿ ಸ್ನೇಹ ಸಮ್ಮಿಲನ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವು ಶನಿವಾರ ಮಧ್ಯಾಹ್ನ ನಡೆಯಿತು.
ಕಾರ್ಯಕ್ರಮವನ್ನು ಮಾಜಿ ಮೇಯರ್ ಕೆ. ಅಶ್ರಫ್ ಉದ್ಘಾಟಿಸಿದರು. ಪತ್ರಕರ್ತ ಬಿ.ಎಸ್. ಇಸ್ಮಾಯಿಲ್ ಕುತ್ತಾರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ಯುವಕವಿಗಳಿಂದ ಕವನ ವಾಚನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾ ಸಂಸ್ಥೆಯ ಸಹಕಾರ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ನಿರ್ದೇಶಕರಾಗಿ ಬಿ.ಎಸ್ ಇಸ್ಮಾಯಿಲ್ ಕುತ್ತಾರ್ ಆಯ್ಕೆಯಾದರು. ಆದ್ಯಕ್ಷರಾಗಿ ಝುಬೈರ್ ಹರೇಕಳ, ಉಪಾಧ್ಯಕ್ಷರಾಗಿ ಆಶಿಕ್ ಕುಕ್ಕಾಜೆ, ಸಮದ್ ಮೊಂಟೆಪದವು ಆಯ್ಕೆಯಾದರು. ರಖೀಬ್ ಕಾರ್ಯದರ್ಶಿಯಾಗಿ ಆಯ್ಕೆಯಾದರೆ, ನಾಸಿರ್ ಸಜಿಪ ಹಾಗೂ ತಸ್ರೀಪ್ ಬಂದರ್ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನಿಝಾಮ್ ಮಂಚಿಯನ್ನು ಮಾದ್ಯಮ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಲೀಂ ಮಲ್ಲಾರ್, ಡಿ.ಐ. ಕೈರಂಗಳ, ಅಬ್ದುರ್ರಹ್ಮಾನ್ ಪ್ರಿಂಟೆಕ್, ನದೀಮ್ ಕಾಸ್ಮೋಸ್, ತರಬೇತುದಾರರಾದ ಅಮ್ಜದ್, ರಿಫಾಯಿ ಭಾಗವಹಿಸಿದ್ದರು.
ಸಂಸ್ಥೆಯ ಮುಖ್ಯಸ್ಥ ಅಹ್ಮದ್ ಕಬೀರ್ ಸ್ವಾಗತಿಸಿ, ಉಪನ್ಯಾಸಕಿ ಸೌಮ್ಯ ವಂದಿಸಿದರು.