ಕೋಡಿ: ಬ್ಯಾರೀಸ್‌ನಲ್ಲಿ ಅಗ್ನಿಶಾಮಕ ಪ್ರಾತ್ಯಕ್ಷಿಕೆ ಕಾರ್ಯಕ್ರಮ
ಕೋಡಿ, ಫೆ. 26: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಬ್ಯಾರೀಸ್ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಅಗ್ನಿ ದುರಂತದ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೋಣಿ-ಕುಂದಾಪುರ ಅಗ್ನಿಶಾಮಕದಳ ಠಾಣಾಧಿಕಾರಿ ವೆಂಕಟರಮಣ ಮೋಗೆರ ಅವರು ಅಗ್ನಿ ದುರಂತ ತಡೆಗಟ್ಟುವ ಮುಂಜಾಗೃತ ಕ್ರಮದ ಬಗ್ಗೆ ಮಾಹಿತಿ ನೀಡಿದರು. ತದನಂತರ ಕುಂದಾಪುರ ತಾಲೂಕಿನ ಅಗ್ನಿಶಾಮಕದಳದ ಸಿಬ್ಬಂದಿ ವರ್ಗದಿಂದ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ವೃಂದ ಹಾಗೂ ಊರ ಗ್ರಾಮಸ್ಥರ ಸಂಮುಖದಲ್ಲಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ವಹಿಸಿದ್ದರು. ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್‌ನ ಮುಖ್ಯಸ್ಥೆ ರೇಷ್ಮಾ ಡಿಸೋಜಾ, ಹಾಜಿ ಕೆ. ಮೋಹಿದ್ದಿನ್ ಬ್ಯಾರಿ, ಮೆಮೋರಿಯಲ್ ಅನುದಾನಿತ ಪ್ರೌಢ ಶಾಲೆಯ ಮುಖ್ಯಸ್ಥೆ ಜಯಂತಿ, ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮೂಖ್ಯೋಪಾಧ್ಯಾಯಿನಿ ರೇಹನಾ ಬೇಗಮ್ ಮತ್ತು ರಾ. ಸೇ. ಯೋ. ಯೋಜನಾಧಿಕಾರಿ ವಿದ್ಯಾಧರ ಪೂಜಾರಿ ಹಾಗು ಉಪನ್ಯಾಸಕರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಶಶಾಂಕ ದ್ವಿತೀಯ ಬಿ.ಕಾಂ ಸ್ವಾಗತಿಸಿ, ವಂದಿಸಿದರು. ಸುಪ್ರೀತಾ ದ್ವಿತೀಯ ಬಿ.ಕಾಂ ಕಾರ್ಯಕ್ರಮ ನಿರೂಪಿಸಿದರು.