ಶ್ರೀದೇವಿ ಪಾರ್ಥಿವ ಶರೀರವನ್ನು ‘ದೇಹ’ ಎಂದ ಮಾಧ್ಯಮ: ತರಾಟೆಗೆ ತೆಗೆದುಕೊಂಡ ನಟ ರಿಶಿ ಕಪೂರ್
Update: 2018-02-26 19:46 IST
ಹೊಸದಿಲ್ಲಿ, ಫೆ. 26: ಬಾಲಿವುಡ್ ನಟಿ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ‘ಕೇವಲ ದೇಹ’ ಎಂದು ಉಲ್ಲೇಖಿಸಿದ ಮಾಧ್ಯಮವನ್ನು ರಿಶಿ ಕಪೂರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಸೋದರಳಿಯ ಮೋಹಿತ್ ಮರ್ವಾಹ್‌ನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತನ್ನ ಪತಿ ಬೋನಿ ಕಪೂರ್ ಹಾಗೂ ಪುತ್ರಿ ಖುಶಿ ಅವರೊಂದಿಗೆ ದುಬೈಗೆ ತೆರಳಿದ್ದ ಶ್ರೀದೇವಿ ಶನಿವಾರ ರಾತ್ರಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು.
ನಟಿಯ ನಿಧನದ ಬಗ್ಗೆ ಸುದ್ದಿ ಪ್ರಕಟಿಸಿದ ಮಾಧ್ಯಮಗಳ ಬಗ್ಗೆ ರವಿವಾರ ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಕಪೂರ್, ‘‘ಶ್ರೀದೇವಿ ಪಾರ್ಥಿವ ಶರೀರ ಇದ್ದಕ್ಕಿದ್ದಂತೆ ದೇಹ ಹೇಗಾಯಿತು’’ ಎಂದು ಪ್ರಶ್ನಿಸಿದ್ದಾರೆ.