ಪ್ರಪಂಚದಲ್ಲಿ ಹೆಣ್ಣಿನ ಸ್ಥಾನವೇ ದೊಡ್ಡದು: ಸುಕ್ರಿ ಬೊಮ್ಮಗೌಡ
ಕುಂದಾಪುರ, ಫೆ. 26: ಪ್ರಪಂಚದಲ್ಲಿ ಗಂಡು ಅಥವಾ ಹೆಣ್ಣಲ್ಲಿ ಯಾರು ಮಿಗಿಲು ಎನ್ನುವಾಗ ಹೆಣ್ಣೇ ಮಿಗಿಲು. ಪ್ರಪಂಚದಲ್ಲಿ ಹೆಣ್ಣಿನ ಸ್ಥಾನವೇ ದೊಡ್ಡದು. ಇಡೀ ಜಗತ್ತಿಗೆ ಹಾಲು ಅನ್ನ ಕೊಡುವವಳು ಮಹಾತಾಯಿ, ಜಗನ್ಮಾತೆ ಪಾರ್ವತಿ. ದೇಶ ಒಳ್ಳೆಯದಾಗಿ ಸುಸ್ಥಿತಿಯಲ್ಲಿರುವುದಕ್ಕೆ ಪಾರ್ವತಿ ಯನ್ನು ಸುಖಿಯಾಗಿ ಇರಿಸಬೇಕು ಎಂದು ಪದ್ಮಶ್ರೀ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತ ಜಾನಪದ ಹಾಡುಗಾರ್ತಿ ಸುಕ್ರಿ ಬೊಮ್ಮಗೌಡ ಹೇಳಿದ್ದಾರೆ.
ಸ್ಥಳೀಯ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ವಜ್ರ ಮಹೋತ್ಸವ, ಮಾಹೆಯ ಬೆಳ್ಳಿಹಬ್ಬ ಹಾಗೂ ಭಂಡಾರ್‌ಕಾರ್ಸ್ ಕಾಲೇಜಿನ 55ನೇ ವರ್ಷಾಚರಣೆ ಪ್ರಯುಕ್ತ ಹಮ್ಮಿ ಕೊಂಡಿರುವ ‘ಕರಾವಳಿ ಕರ್ನಾಟಕದ ಬುಡಕಟ್ಟುಗಳು ಹಾಗೂ ವರ್ತಮಾನ’ ಕುರಿತ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ಬುಡಕಟ್ಟು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷತೆ ಹಿಸಿ ಅವರು ಮಾತನಾಡುತಿದ್ದರು.
ಹಾಲು ಅನ್ನ ಕೊಡುವವರೇ ಹಾಲಕ್ಕಿಗಳು. ಬಡತನವಾದರೂ ಪರವಾಗಿಲ್ಲ ಹಾಲು ಹಾಗೂ ಅನ್ನಕ್ಕೆ ಕೊರತೆಯಾಗಬಾರದು ಎಂಬುದು ಬುಡಕಟ್ಟು ಜನರ ಪದ್ಧತಿ. ಈ ಬುಡಕಟ್ಟು ಸಮುದಾಯವಿಲ್ಲದೆ ನಾಡಿನ ಅಭಿವೃದ್ಧಿ ಅಸಾಧ್ಯ ಎಂದು ಹಾಲಕ್ಕಿ ಒಕ್ಕಲಿಗ ಸಮುದಾಯದ ಸುಕ್ರಿ ಬೊಮ್ಮಗೌಡ ಹೇಳಿದರು.
ಕುಂದಾಪುರದ ಇಷ್ಟೊಂದು ಒಳ್ಳೆಯ ಸಂಸ್ಥೆಯಲ್ಲಿ ಬುಡಕಟ್ಟು ಜನರ ಏಳ್ಗೆ ಗೋಸ್ಕರ ಕಾರ್ಯಕ್ರಮ ನಡೆಯುತ್ತಿರುವುದೇ ಸಂತೋಷದ ವಿಷಯ.ಇಲ್ಲಿ ಡಾಕ್ಟರುಗಳಿದ್ದಾರೆ. ಇವರೆಲ್ಲ ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲೊಂದು ಒಳ್ಳೆಯ ಆಸ್ಪತ್ರೆಯನ್ನು ತೆರೆಯಲಿ ಎನ್ನುವುದು ನನ್ನ ಆಸೆಯಾಗಿದೆ ಎಂದವರು ನುಡಿದರು. ಕಾರ್ಯಕ್ರಮದಲ್ಲಿ ಸುಕ್ರಿ ಬೊ್ಮು ಗೌಡರನ್ನು ಸನ್ಮಾನಿಸಲಾಯಿತು.
ಕುಂದಾಪುರದ ಇಷ್ಟೊಂದು ಒಳ್ಳೆಯ ಸಂಸ್ಥೆಯಲ್ಲಿ ಬುಡಕಟ್ಟು ಜನರ ಏಳ್ಗೆ ಗೋಸ್ಕರ ಕಾರ್ಯಕ್ರಮ ನಡೆಯುತ್ತಿರುವುದೇ ಸಂತೋಷದ ವಿಷಯ.ಇಲ್ಲಿ ಡಾಕ್ಟರುಗಳಿದ್ದಾರೆ. ಇವರೆಲ್ಲ ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲೊಂದು ಒಳ್ಳೆಯ ಆಸ್ಪತ್ರೆಯನ್ನು ತೆರೆಯಲಿ ಎನ್ನುವುದು ನನ್ನ ಆಸೆಯಾಗಿದೆ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಸುಕ್ರಿ ಬೊಮ್ಮ ಗೌಡರನ್ನು ಸನ್ಮಾನಿಸಲಾಯಿತು. ಸಮ್ಮೇಳನವನ್ನು ಭತ್ತದ ತೆನೆಗೆ ಹಾಲೆರೆದು, ಗುಮ್ಮಟೆ ಬಾರಿಸಿ ಉದ್ಘಾಟಿಸಿದ ಮಾಹೆ ವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಬುಡಕಟ್ಟು ಸಮುದಾಯಗಳಿಗೆ ಅನುಕಂಪ, ಕರುಣೆ ಬೇಡ; ಅವಕಾಶಗಳನ್ನು ಒದಗಿಸಿಕೊಡಬೇಕು. ಎಲ್ಲಕ್ಕೂ ಮುಖ್ಯವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಪರಿಸರ ನಾಶದಿಂದಾಗಿ ಭೂತಾಪಮಾನ ಹೆಚ್ಚುತ್ತಿದ್ದು, ವಾತಾವರಣದ ಉಷ್ಣತೆ ಏರಿಕೆಯಾಗುತ್ತಿದೆ. ಇದಕ್ಕಾಗಿ ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.
ಆದರೆ ಬುಡಕಟ್ಟು ಸಮುದಾಯ ತಮ್ಮ ಬದುಕಿನ ಉಸಿರಾದ ನಮ್ಮ ಕಾಡು, ನೆಲ-ಜಲವನ್ನು ಉಳಿಸಿ, ಬೆಳೆಸಿ ಅದರಲ್ಲೇ ತಮ್ಮ ಸಂಸ್ಕೃತಿಯೊಂದಿಗೆ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಪ್ರಕೃತಿಯೊಂದಿಗೆ ಜಗತ್ತಿನ ಸಂರಕ್ಷಣೆಗೆ ಬದ್ಧರಾಗಿದ್ದಾರೆ. ಈ ಮೂಲಕ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ನಾಶ ಬುಡಕಟ್ಟುಗಳ ಪ್ರವೃತ್ತಿಯಲ್ಲ: ಕಾಡು, ನದಿ, ವನಗಳ ಜೊತೆ ಜೊತೆಗೆ ಜೀವಿಸುವ ಬುಡಕಟ್ಟು ಜನಾಂಗ ಎಂದಿಗೂ ಅವುಗಳನ್ನು ನಾಶ ಮಾಡುವ ಪ್ರವೃತ್ತಿಯವರಲ್ಲ. ನಿಸರ್ಗದೊಂದಿಗೆ ಅನ್ಯೋನ್ಯತೆಯಿಂದಿರುವ ಕುಡುಬಿ, ಗೊಂಡ, ಕೊರಗರು, ಹಾಲಕ್ಕಿ ಒಕ್ಕಲಿಗದಂತಹ ಬುಡಕಟ್ಟು ಸಮುದಾಯಗಳು ಆಧುನಿಕತೆಯ ಭರಾಟೆಯಲ್ಲಿ, ಅಭಿವೃದ್ಧಿಯ ನೆಪದಲ್ಲಿ ಸಂಕಟದಲ್ಲಿವೆ. ಆದರೆ ಅವರ ಪ್ರಗತಿಯಾಗದೇ ಈ ನಾಡಿನ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ರೇಖಾ ಬನ್ನಾಡಿ ಹೇಳಿದರು.
ಭಂಡಾರ್‌ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಸಮ್ಮೇಳನದ ಸಂಚಾಲಕ ಡಾ.ಶುಭಕರಾಚಾರಿ ವಂದಿಸಿದರು. ಉಪನ್ಯಾಸಕಿ ರೋಹಿಣಿ ಎಚ್. ಕಾರ್ಯಕ್ರಮ ನಿರೂಪಿಸಿದರು.