ದುಬೈ ಪೊಲೀಸರ ಬೋನಿಗೆ ಬಿದ್ದರೆ ಶ್ರೀದೇವಿ ಪತಿ ?

Update: 2018-02-26 15:08 GMT

ದುಬೈ ಪೊಲೀಸರ ಮುಂದಿದೆ 3 ಪ್ರಶ್ನೆಗಳು

ದುಬೈ,ಫೆ.26 : ದುಬೈ ಪೊಲೀಸರು ಶ್ರೀದೇವಿ ಪಾರ್ಥಿವ ಶರೀರಕ್ಕೆ ಎಂಬಾಮಿಂಗ್ ( ಮೃತದೇಹ ಹಾಳಾಗದಂತೆ ಇಡುವ ) ಹಾಗು ಭಾರತಕ್ಕೆ ಕಳಿಸುವ ಪ್ರಕ್ರಿಯೆಗಾಗಿ ಬಿಟ್ಟುಕೊಟ್ಟಿದ್ದಾರೆ. ಅಂದರೆ ಅಲ್ಲಿಗೆ ಪ್ರಕರಣ ಇತ್ಯರ್ಥವಾಯಿತೇ ?  

ಇಲ್ಲ !

ದುಬೈ ಪೋಲೀಸರ ಬಳಿ ವಿಶ್ವದಲ್ಲೇ ಶ್ರೇಷ್ಠ ವಿಧಿವಿಜ್ಞಾನ ಲ್ಯಾಬ್ ಗಳು, ಅತ್ಯಾಧುನಿಕ ಉಪಕರಣಗಳಿವೆ. ಇವುಗಳ ಸಹಾಯದಿಂದ ಎಂತೆಂತಹ ಪ್ರಕರಣಗಳನ್ನು ಅವರು ಕೆಲವೇ ಗಂಟೆಗಳಲ್ಲಿ ಭೇದಿಸಿದ ಉದಾಹರಣೆಗಳು ಸಾಕಷ್ಟಿವೆ. ಅಂತಹ ಅತ್ಯುತ್ತಮ ತನಿಖಾ ದಾಖಲೆ ಅಲ್ಲಿಯ ಪೊಲೀಸರದ್ದು. ಹಾಗಾಗಿ ಈ ಪ್ರಕರಣ ಇನ್ನೂ ಮುಗಿದಿಲ್ಲ. 

ಪ್ರಕರಣ ಈಗ ದುಬೈ ಪೊಲೀಸರಿಂದ ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಇಲಾಖೆಗೆ ತಲುಪಿದೆ. 

ಸದ್ಯಕ್ಕೆ ಪ್ರಕರಣದಲ್ಲಿ ಯಾವುದೇ ಅಪರಾಧ ಎಸಗಿದ್ದು ಕಂಡು ಬರುತ್ತಿಲ್ಲ. ಆದರೆ ಆಕೆ ಬಾತ್ ಟಬ್ ನಲ್ಲಿ ಮುಳುಗಲು ಕಾರಣವಾದ ಅಂಶಗಳ ಕುರಿತು ತನಿಖೆ ನಡೆಸಲಿದೆ. ಮೊದಲು ವಿಧಿವಿಜ್ಞಾನ ವರದಿ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಗೆ ಹೋಗುತ್ತದೆ. ಅಲ್ಲಿ ವರದಿಯನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತದೆ. ಬಳಿಕ ಮುಂದಿನ ಕ್ರಮ ನಿರ್ಧಾರವಾಗುತ್ತದೆ. ಪ್ರಕರಣದಲ್ಲಿ ಇನ್ನೂ ಹೆಚ್ಚಿನ ವಿವರ ಬಹಿರಂಗಪಡಿಸುವ ಸಾಧ್ಯತೆ ಇದೆ ಎಂದು ಯಾರ ಮೇಲಾದರೂ ಸಂಶಯ ಬಂದರೆ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. 

ಇದು ಆಕೆ ಆಲ್ಕೋಹಾಲ್ ಸೇವಿಸಿದ್ದರೇ ?  
ಬಾತ್ ಟಬ್ ನಲ್ಲಿ ನೀರು ತುಂಬಿದ್ದು ಹೇಗೆ ?
ಬೋನಿ ಕಪೂರ್ 6.25 ಕ್ಕೆ ಬಾತ್ ರೂಮಿನ ಬಾಗಿಲು ಮುರಿದು ಒಳಗೆ ಹೋಗಿದ್ದರೆ  ಹೋಟೆಲ್ ಸಿಬ್ಬಂದಿಯನ್ನು ಮೊದಲು ಕರೆಯದೆ ಮಿತ್ರರನ್ನು ಕರೆದಿದ್ದು ಏಕೆ ?
ಪೊಲೀಸರಿಗೆ ಮಾಹಿತಿ ನೀಡುವಾಗ 9 ಗಂಟೆಯಾಗಿದ್ದು ಹೇಗೆ ?
ಇತ್ಯಾದಿ ಪ್ರಶ್ನೆಗಳಿಗೆ ದುಬೈ ಪೊಲೀಸರಿಗೆ ಉತ್ತರ ಸಿಗಬೇಕಾಗಿದೆ.  

ಇದು ಅಲ್ಲಿನ ಪೋಲೀಸರ ವಿಚಾರಣಾ ಕ್ರಮ. ಸದ್ಯಕ್ಕೆ ಅವರಿಗೆ ಯಾರ ಮೇಲೂ ಸಂಶಯವಿಲ್ಲ. ಆದರೆ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ಮಾತ್ರ ಅವರಿಗೆ ಸಿಗಲೇಬೇಕು. ಒಂದಿಷ್ಟೇ ಇಷ್ಟು ಸಂಶಯ ಯಾರ ಮೇಲಾದರೂ ಬಂದರೆ ಅವರನ್ನು ದೇಶ ಬಿಟ್ಟು ಹೋಗಲು ದುಬೈ ಪೊಲೀಸರು ಬಿಡುವುದಿಲ್ಲ. ವೈದ್ಯಕೀಯ ವರದಿ ಹಾಗು ಮೃತದೇಹ ಬಿಟ್ಟು ಕೊಡುವುದಕ್ಕೂ ಈ ವಿಚಾರಣಾ ಪ್ರಕ್ರಿಯೆಗೂ ಯಾವುದೇ ಸಂಬಂಧವಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News