ಲೀಸೆಸ್ಟರ್ ಕಟ್ಟಡದಲ್ಲಿ ಸ್ಫೋಟ: 4 ಸಾವು

Update: 2018-02-26 16:09 GMT

ಲೀಸೆಸ್ಟರ್ (ಬ್ರಿಟನ್), ಫೆ. 26: ಬ್ರಿಟನ್‌ನ ಲೀಸೆಸ್ಟರ್ ನಗರದ ಅಂಗಡಿ ಮತ್ತು ಮನೆಯೊಂದರಲ್ಲಿ ರವಿವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ನಾಲ್ವರು ಗಾಯಗೊಂಡಿದ್ದಾರೆ ಎಂದು ಬ್ರಿಟಿಶ್ ಪೊಲೀಸರು ಹೇಳಿದ್ದಾರೆ.

‘‘ಈ ಹಂತದಲ್ಲಿ ನಾಲ್ವರು ಮೃತಪಟ್ಟಿರುವುದು ದೃಢಪಟ್ಟಿದೆ ಹಾಗೂ ಹಲವಾರು ಮಂದಿ ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’’ ಎಂದು ಲೀಸೆಸ್ಟರ್‌ಶಯರ್ ಪೊಲೀಸ್ ಸೂಪರಿಂಟೆಂಡೆಂಟ್ ಶೇನ್ ಓ’ನೀಲ್ ಹೇಳಿದರು.

‘‘ಮೃತಪಟ್ಟವರು ಅಥವಾ ಗಾಯಗೊಂಡವರು ಪತ್ತೆಯಾಗದೆ ಇರುವ ಸಾಧ್ಯತೆ ಇದೆ ಎಂದು ನಾವು ಭಾವಿಸಿದ್ದೇವೆ. ಅವರನ್ನು ಪತ್ತೆಹಚ್ಚುವುದಕ್ಕಾಗಿ ರಕ್ಷಣಾ ಕಾರ್ಯ ಸಾಗುತ್ತಿದೆ’’ ಎಂದು ಓ’ನೀಲ್ ತಿಳಿಸಿದರು.

ಕಟ್ಟಡವೊಂದರಲ್ಲಿ ರವಿವಾರ ರಾತ್ರಿ ಸಂಭವಿಸಿದ ಸ್ಫೋಟದಲ್ಲಿ ನೆಲ ಅಂತಸ್ತಿನಲ್ಲಿದ್ದ ಅಂಗಡಿ ಮತ್ತು ಅದರ ಮೇಲಿದ್ದ ಎರಡು ಮಹಡಿಗಳ ಅಪಾರ್ಟ್‌ಮೆಂಟ್ ಧ್ವಂಸಗೊಂಡಿದೆ.

ಸ್ಫೋಟವು ಭಯೋತ್ಪಾದನಾ ಕೃತ್ಯ ಎಂಬುದನ್ನು ಸೂಚಿಸುವ ಲಕ್ಷಣಗಳು ತಕ್ಷಣಕ್ಕೆ ಗೋಚರಿಸಿಲ್ಲ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News